Header Ads

ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜಿಗೆ ಭೆಟಿ ನೀಡುವ ಅನುಮತಿ ರದ್ದು

 ವಿದ್ಯಾರ್ಥಿಗಳಿಗೆ ಶಾಲಾ - ಕಾಲೇಜಿಗೆ ಭೆಟಿ ನೀಡುವ ಅನುಮತಿ ರದ್ದು




ಕೇಂದ್ರ ಸರ್ಕಾರದ ಅನ್‌ಲಾಕ್‌ 4.0 ಮಾರ್ಗಸೂಚಿ ಅನುಸಾರ ಪ್ರೌಢ ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳು ಸಪ್ಟೆಂಬರ್‌ 21 ರಿಂದ ಶಾಲಾ - ಕಾಲೇಜು ಭೆಟಿಗೆ ಅವಕಾಶ ನೀಡಲಾಗಿತ್ತು.  ಶಿಕ್ಷಣ ಸಚಿವರು ನಿನ್ನೆ ಸುದ್ದಿಗೊಷ್ಟಿಯಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಿದ್ದರು. ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿರುವುದನ್ನು ಮನಗಂಡ ರಾಜ್ಯ ಸರ್ಕಾರ ತನ್ನ ನಿರ್ಧಾರವನ್ನು ಬದಲಾಯಿಸಿದೆ. ನಿನ್ನೆ ನೀಡಿದ ಅನುಮತಿಯನ್ನು ಹಿಂಪಡೆದು ಸೆಪ್ಟೆಂಬರ್‌ ಅಂತ್ಯದವರೆಗೂ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಭೆಟಿ ನೀಡದಂತೆ ತಿಳಿಸಿದೆ.


ಕೊರೊನಾ ಹಿನ್ನೆಲೆಯಲ್ಲಿ ರಾಜ್ಯದ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲಾ ಕಾಲೇಜುಗಳನ್ನು ಆರಂಭಿಸುವ ಬಗ್ಗೆ ನಿರ್ಧಾರ ಪ್ರಕಟಿಸಿತ್ತು. ಕೇಂದ್ರ ಸರ್ಕಾರದ ಗೃಹ ಇಲಾಖೆಯ ಆದೇಶದಂತೆ ಕಂಟೈನ್ಮೆಂಟ್‌ ವಲಯ ಹೊರತು ಪಡಿಸಿ ಬೇರೆ ಕಡೆಗಳಲ್ಲಿ ಶಲೆಗಳನ್ನು 9 ರಿಂದ 12 ನೇ ತರಗತಿ ವರೆಗಿನ ವಿದ್ಯಾರ್ಥಿಗಳು ಶಾಲೆಗೆ ಭೆಟಿ ನೀಡಿ ತಮ್ಮಲ್ಲಿರು ಸಂದೇಹಗಳನ್ನು ಪರಿಹರಿಸಿಕೊಳ್ಳಬಹುದೆಂದು ಅನುಮತಿ ನೀಡಿತ್ತು.

ಈ ಸಂಬಂಧ ವಿವಿರವಾಗಿ ಪರಿಶಿಲಿಸಿದ ನಂತರ ರಾಜ್ಯದಲ್ಲಿ ಪ್ರಸ್ತುತ ಕೋವಿಡ್‌ - 19 ಹೆಚ್ಚುತ್ತಿರುವ ಪ್ರಮಾಣ ಕಡಿಮೆಯಾಗದಿರುವ ಕಾರಣ , ಈಗಿನ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಶಾಲೆಗೆ ಭೇಟಿ ನೀಡುವುದು ಕ್ಷೇಮಕರವಲ್ಲ ಎಂದು ಪರಿಗಣಿಸಿ ವಿದ್ಯಾರ್ಥಿಗಳು ಶಾಲಾ - ಕಾಲೇಜಿಗೆ ಭೇಟಿ ನೀಡುವ ಅನುಮತಿಯನ್ನು ಹಿಂಪಡೆಯಲಾಗಿದೆ.




No comments

Powered by Blogger.