ಶಿಕ್ಷಕರ ವರ್ಗಾವಣೆ ಶಿಕ್ಷಕ ಮಿತ್ರ ಆ್ಯಪ್ ಮೂಲಕ
ಶಿಕ್ಷಕರ ವರ್ಗಾವಣೆ " ಶಿಕ್ಷಕ ಮಿತ್ರ " ಆ್ಯಪ್ ಮೂಲಕ
ಶಿಕ್ಷಕರ ಸೇವಾ ಮಾಹಿತಿ, ಶಿಕ್ಷಕರ ವರ್ಗಾವಣೆ ಹಾಗೂ ಶಿಕ್ಷಕರ ಸಮಸ್ಯೆಗಳಿಗೆ ಸಂಬಂಧಸಿದಂತೆ ಬಹು ಬೇಗ ಪರಿಹಾರ ಕಲ್ಪಿಸುವ ಉದ್ದೇಶದಿಂದ ಸಾರ್ವಜನಿಕ ಶಿಕ್ಷಣ ಇಲಾಖೆ " ಶಿಕ್ಷಕ ಮಿತ್ರ " ಎಂಬ ಮೊಬೈಲ್ app ಅಭಿವೃದ್ಧಿಪಡಿಸಲಾಗಿದೆ.
" ಶಿಕ್ಷಕ ಮಿತ್ರ " app ಇಂದು ವಿಧಾನ ಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನವರು ಈ app ನ್ನು ಬಿಡುಗಡೆಗೊಳಿಸಿದರು.
ಸರಕಾರದ ಇ - ಆಡಳಿತ ಇಲಾಖೆಯ ನರವಿನಲ್ಲಿ " ಶಿಕ್ಷಕ ಮಿತ್ರ " app ನಲ್ಲಿ ಈಗಾಗಲೆ ರಾಜ್ಯದ 2.50 ಲಕ್ಷ ಶಿಕ್ಷಕರ ಮಾಹಿತಿಗಳನ್ನು ಅಪ್‌ಲೊಡ್ ಮಾಡಲಾಗಿದೆ. ಇದರ ಮೂಲಕವೇ ಈ ವರ್ಷದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆಸಲಾಗುವುದು ಎಂದು ತಿಳಿಸಲಾಗಿದೆ.
ಸೆಪ್ಟೆಂಬರ್ ಮೊದಲ ವಾರದಲ್ಲಿ ವರ್ಗಾವಣೆ ಪ್ರಕ್ರಿಯೆಗೆ ಇಲಾಖೆ ಚಾಲನೆ ನೀಡಲಿದ್ದು, ಈ app ಮೂಲಕವೇ ಅರ್ಜಿ ಸಲ್ಲಿಸಬೇಕಾಗಿದೆ. ಆ ಮೂಲಕ ಇಡೀ ವರ್ಗಾವಣೆ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ಮಾಡಲು ಸಂಪೂರ್ಣ ತಂತ್ರಜ್ಞಾನ ಆಧಾರಿತ ವ್ಯವಸ್ತೆಗೆ ಇದೇ ಮೊದಲ ಬಾರಿಗೆ ಇಲಾಖೆ ಸಜ್ಜಾಗಿದೆ.
ವರ್ಗಾವಣೆ ಬಯಸುವ ಶಿಕ್ಷಕರು ತಮ್ಮ ಮೊಬೈಲ್‌ನಲ್ಲಿ app ನ್ನು ಡೌನ್‌ಲೋಡ್ ಮಾಡಿ ಕೊಂಡಿರಬೇಕು. ತಾವಿರುವ ಸ್ಥಳದಿಂದಲೆ ವರ್ಗಾವಣೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಗೆ ಸಂಬಂಧಿಸಿದಂತೆ ಎಲ್ಲಾ ಮಾಹಿತಿಯು ತಮ್ಮ ಮೊಬೈಲ್‌ಗೆ ರವಾನೆಯಾಗಲಿದೆ.
ವರ್ಗಾವಣೆಗೆ ಸಂಬಂಧಿಸಿದ ವೇಳಾಪಟ್ಟಿಗೆ ಅನುಗುಣವಾಗಿ ಇದರಲ್ಲಿ ಮಾಹಿತಿಗಳು ಅಪ್‌ಡೆಟ್ ಆಗಲಿವೆ.
ಕಳೆದ ಬಾರಿ ಕಡ್ಡಾಯ ವರ್ಗಾವಣೆ ಆಗಬೇಕಾದವರು ಮತ್ತು ಹೆಚ್ಚುವರಿ ಶಿಕ್ಷಕರೆಂದು ವರ್ಗಾವಣೆ
ಅಗಬೇಕಾದವರಿಗೆ ಈ ಭಾರಿ ಮೋದಲ ಆದ್ಯತೆ ಕಲ್ಪಸಲಾಗಿದೆ. ಬಳಿಕೆ 50 ವರ್ಷ ದಾಟಿದವರಿಗೆ ವರ್ಗಾವಣೆಗೆ ವಿನಾಯಿತಿ ನೀಡಲಾಗುತ್ತದೆ. ಒಟ್ಟಾರೆ ವರ್ಗಾವಣೆಯು ಶಿಕ್ಷಕ ಸ್ನೆಯಿ ಆಗಲಿದೆ.
ಶಿಕ್ಷಕರು ತಮ್ಮ ಕೆಲಸಕಾರುಗಳಿಗಾಗಿ ಶಾಲೆಗಳಿಗೆ ರಜೆ ಹಾಕಿ ಇಲಾಖೆಯ ಕಚೇರಿಗಳಿಗೆ ಅಲೆದಾಡುವದನ್ನು ತಪ್ಪಿಸಲು ಮತ್ತು ಶಿಕ್ಷಕರಿಗೆ ಅನುಕೂಲವಾಗುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಈ ನಿರ್ಧಾರ ತರಗೆದುಕೊಂಡು ಮಾನ್ಯ ಶಿಕ್ಷಣ ಸಚಿವರ ಆಶಯದಂತೆ ಈ app ತಯಾರಿಸಲಾಗಿದೆ.
ಶಿಕ್ಷಕರು ಮೊಬೈಲ್‍ನಲ್ಲಿ ಈ ಆಪ್‍ನ್ನು ಡೌನ್‍ಲೋಡ್ ಮಾಡಿಕೊಂಡು ತಾವು ಕುಳಿತಲ್ಲೇ ತಮ್ಮ ಸೇವಾ ವಿಷಯಗಳನ್ನು, ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಇನ್ಮುಂದೆ ಶಿಕ್ಷಕರ ಅಲೆದಾಟಕ್ಕೆ ಆ್ಯಪ್ ಸೇವೆಯ ಮೂಲಕ ತೆರೆ ಬೀಳಲಿದೆ ಎಂದು ಹೆಳಲಾಗಿದೆ.

No comments