ಅಕ್ಟೋಬರ್ 1 ರಿಂದ ಶಾಲಾ ಕಾಲೇಜು ಪುನರಾರಂಭಿಸಲು ನಿರ್ಧಾರ
ಅಕ್ಟೋಬರ್ 1 ರಿಂದ ಶಾಲಾ ಕಾಲೇಜು ಪುನರಾರಂಭಿಸಲು ನಿರ್ಧಾರ
ಅಕ್ಟೋಬರ್ 1 ರಿಂದ ಶಾಲಾ ಕಾಲೇಜು ಪನರಾರಂಭಿಸಲು ಸರ್ಕಾರ ನಿರ್ಧರಿಸಿದೆ. ಕರೊನಾ ವೈರಸ್
ಸೊಂಕಿನ ನಡುವೆಯು ಉನ್ನತ ಶಿಕ್ಷಣ ಇಲಾಖೆ ಕಾಲೇಜು ಗಳನ್ನು ಪುನರಾರಂಭಿಸಲು ಮುಂದಾಗಿದೆ.
ಸುರಕ್ಷಿತ ಕ್ರಮಗಳನ್ನು ಕೈಗೊಂಡು ತರಗತಿಗಳನ್ನು ನಡೆಸಲು ಯುಜಿಸಿ ಸೂಚಿಸಿರುವುದರಿಂದ ಈ
ನಿರ್ಧಾರ ಕೈಗೊಳ್ಳಲಾಗಿದೆ.
ರಾಜ್ಯದಲ್ಲಿ ಸೆಪ್ಟೆಂಬರ್ ಅಂತ್ಯದಿಂದಲೇ ಶಾಲಾ ಕಾಲೇಜುಗಳಿಗೆ ಕರೊನಾ ಪ್ರಭಾವದಿಂದಾಗಿ ರಜೆ
ಘೊಸಿಸಲಾಗಿತ್ತು. ಈಗ 3.O ಲಾಕ್ ಡೌನ್ ಅಂತ್ಯವಾಗಲಿದ್ದು ಸೆಪ್ಟೆಂಬರ್ ತಿಂಗಳಿನಿಂದಲೆ
ರಾಜ್ಯದಲ್ಲಿ ಶಾಲೆಗಳು ಆರಂಭಿಸಬೇಕು ಎನ್ನುವ ಚಿಂತನೆಯು ನಡೆದಿದೆ.
![]() |
ಈಗಲೂ ಸಹ ರಾಜ್ಯದಲ್ಲಿ ಕರೊನಾ ಸೊಂಕಿನ ಪ್ರಭಾವ ದಿನೆ ದಿನೆ ಹಿಚ್ಚುತ್ತಲೆ ಇದೆ, ಈ ಮಧ್ಯೆಯು
ಶಾಲೆಗಳನ್ನು ಆರಂಭಿಸಿ 4 ಗಂಟೆಗಳ ಕಾಲ ಬೋಧನೆಗೆ ಅವಕಾಶ ನೀಡಿ , ಶೈಕ್ಷಣಿಕ ಕಾರ್ಯಗಳಿಗೆ
ಅವಕಾಶ ನೀಡಲು ಸರ್ಕಾರ ಮುಂದಾಗಿದೆ.
ಸೊಂಕು ತಡೆಗಟ್ಟುವ ಕ್ರಮಗಳನ್ನು ಶಾಲೆಗಳಲ್ಲಿ ಕೈಕೊಳ್ಳಬೇಕಾಗಿದೆ ವಿದ್ಯಾರ್ಥಿಗಳ ಸುರಕ್ಷತೆಗೆ
ಮಾಸ್ಕ್ ಮತ್ತು ಹ್ಯಾಂಡ್ ಗ್ಲೌಸ್ ಗಳ ಬಳಕೆ ಹಾಗೆ ವಿದ್ಯಾರ್ಥಿಗಳ ನಡುವೆ ಸಾಮಾಜಿಕ ಅಂತರ
ಕಾಯ್ದುಕೊಳ್ಳುವದು ಮುಖ್ಯವಾಗಿದೆ.
![]() |
ಮೊದಲಿಗೆ ಪದವಿ ತರಗತಿಗಳನ್ನು ಆರಂಭಿಸಿ ಹಂತ ಹಂತ ವಾಗಿ ಎಲ್ಲಾ ತರಗತಿಗಳನ್ನು
ಆರಂಭಿಸಬೇಕಾಗಿದೆ. ಸೆಪ್ಟೆಂಬರ್ 1 ರಿಂದ ಕಾಲೇಜು ತರಗತಿಗಳನ್ನು ಆನ್ ಲೈನ್ ನಲ್ಲಿ
ನಡೆಸಲಾಗುತ್ತದೆ ಎಂದು ತಿಳಿದು ಬಂದಿರುತ್ತದೆ.
ಆದರೆ ಇದರ ಕುರಿತಾಗಿ ಯಾವುದೇ ಅಧಿಕೃತ ಆದೇಶ ಹೊರಬಂದಿರುವುದಿಲ್ಲ.
ಕಾಲೇಜುಗಳ ಆರಂಭಕ್ಕೆ ಕೇಂದ್ರ ಸರ್ಕಾರವು ಸಹ ಮಾರ್ಗಸೂಚಿಯನ್ನು ಹೊರಡಿಸುವ ಸಾದ್ಯತೆ ಇದೆ.


No comments