Header Ads

GMAT : MCQ's Problemes on Calender for all CET, NMMS & NTSE Exam : ಕ್ಯಾಲೆಂಡರ್‌ಗೆ ಸಂಬಂಧಿಸಿದ ರಸಪ್ರಶ್ನೆಗಳು.

 GMAT : MCQ's Problemes on Calender for all CET, NMMS & NTSE Exam : ಕ್ಯಾಲೆಂಡರ್‌ಗೆ ಸಂಬಂಧಿಸಿದ ರಸಪ್ರಶ್ನೆಗಳು.



GMAT : MCQ's Problemes on Calender for all CET, NMMS & NTSE Exam : ಕ್ಯಾಲೆಂಡರ್‌ಗೆ ಸಂಬಂಧಿಸಿದ ರಸಪ್ರಶ್ನೆಗಳು.  

0%
Question 1: ಜೂನ್‌ 5 2016 ರಂದು ರವಿವಾರವಾದರೆ, ಅಗಷ್ಟ್‌ 5 2016 ರಂದು ಯಾವ ವಾರವಾಗಿರುತ್ತದೆ ?
A)     ಗುರುವಾರ
B)     ಶುಕ್ರವಾರ
C)     ಶನಿವಾರ
D)     ಬುಧವಾರ
Explanation: ಜೂನ್‌ 5 2016 ರಂದು ರವಿವಾರ.
ಜೂನ್‌ : 30 - 5 = 25, ಜುಲೈ : 31, ಅಗಷ್ಟ್‌ : 5, ಒಟ್ಟು ದಿನಗಳ ಸಂಖ್ಯೆ = 25+31+5 = 61
61/7 = 5 ದಿನ (0-ರವಿ, 1-ಸೋಮ, 2-ಮಂಗಳ, 3-ಬುಧ, 4-ಗುರು, 5-ಶುಕ್ರ, 6-ಶನಿ)
ರವಿವಾರ + 5ನೇ ದಿನ => ಶುಕ್ರವಾರ.

Question 2: ಇಂದು ಶುಕ್ರವಾರವಾದರೆ 100 ದಿನಗಳ ನಂತರ ಯಾವ ವಾರ ?
A)     ರವಿವಾರ
B)     ಸೋಮವಾರ
C)     ಶನಿವಾರ
D)     ಮಂಗಳವಾರ
Explanation: 100 ದಿನಗಳಲ್ಲಿನ ವಿಷಮ ದಿನಗಳನ್ನು ಕಂಡುಹಿಡಿಯುವುದು.
100/7 = 14 ವಾರಗಳು 2 ಉಳಿದ ದಿನಗಳು. 100 ದಿನಗಳ ನಂತರದ ದಿನ ಶುಕ್ರವಾರ + 2 ನೇ ದಿನ ; 
ಶುಕ್ರವಾರ,ಶನಿವಾರ, ರವಿವಾರ.

Question 3: ಅಗಷ್ಟ್‌ 15 2024 ರಂದು ಗುರುವಾರವಾದರೆ ಅದೇ ಅಗಷ್ಟ್‌ 15 2025 ರಂದು ಯಾವ ವಾರ ವಾಗಿರುತ್ತದೆ ?
A)     ಸೋಮವಾರ
B)     ಮಂಗಳವಾರ
C)     ಗುರುವಾರ
D)     ಶುಕ್ರವಾರ
Explanation: ಅಗಷ್ಟ್‌ 15 2024 ಗುರುವಾರ.
2024 ಸಾಮಾನ್ಯ ವರ್ಷ ವಾದರಿಂದ 1 ವಿಷಮ ದಿನ(odd day) ಬರುತ್ತದೆ.
ಆದರಿಂದ ಅಗಷ್ಟ್‌ 15 2025ರಂದು 1 ದಿನ ಮುಂದೆ ಹೋಗುತ್ತದೆ. => ಶುಕ್ರವಾರ

Question 4: ಜನವರಿ 1 2020 ರಂದು ಬುಧವಾರವಾದರೆ ಅದೇ ಜನವರಿ 1 2021ರಂದು ಯಾವ ವಾರವಾಗಿರುತ್ತದೆ ?
A)     ಶುಕ್ರವಾರ
B)     ಗುರುವಾರ
C)     ಮಂಗಳವಾರ
D)     ಬುಧವಾರ
Explanation: ಜನವರಿ 1 2020 ಬುಧವಾರ.
2020 ಅಧಿಕ ವರ್ಷ ವಾದರಿಂದ 2 ವಿಷಮ ದಿನ(odd day) ಬರುತ್ತದೆ.
ಆದರಿಂದ ಜನವರಿ 1 2021ರಂದು 2 ದಿನ ಮುಂದೆ ಹೋಗುತ್ತದೆ. => ಶುಕ್ರವಾರ .

Question 5: ಜನವರಿ 1 2016 ರಂದು ಸೋಮವಾರವಾದರೆ, ಮಾರ್ಚ್‌ 1 2017 ರಂದು ಯಾವ ವಾರವಾಗಿರುತ್ತದೆ ?
A)     ಗುರುವಾರ
B)     ಶುಕ್ರವಾರ
C)     ಶನಿವಾರ
D)     ಸೋಮವಾರ
Explanation: ಜನವರಿ 1 2016 ರಂದು ಸೋಮವಾರ(2016 ಅಧಿಕ ವರ್ಷ)
ಒಟ್ಟು ವಿಷಮ ದಿನಗಳು = ಜನವರಿ 1 2016 ರಿಂದ ಜನವರಿ 1 2017 ರ ವರೆಗೆ = 2 ದಿನ
ಜನವರಿ ; 31 - 1 = 30 ದಿನ ; ಫೆಬ್ರವರಿ = 28 ದಿನ, ಮಾರ್ಚ = 1 ದಿನ, ಒಟ್ಟು ದಿನಗಳು = 2+30+28+1 = 61
61/7 = 5 ದಿನ, ಸೋಮವಾರ + 5 ದಿನ = ಶನಿವಾರ

Question 6: ತಿಂಗಳ 6ನೇ ದಿನ ಶುಕ್ರವಾರವಾಗಿದ್ದರೆ, ಯಾವ ದಿನವು ತಿಂಗಳ 14ನೇ ದಿನವಾಗಿರುತ್ತದೆ ?
A)     ಬುಧವಾರ
B)     ಶನಿವಾರ
C)     ಶುಕ್ರವಾರ
D)     ಭಾನುವಾರ
Explanation: ಒಟ್ಟು ದಿನಗಳು = 14 - 6 = 8 => 8/7 = 1 ಬೆಸ ದಿನ
 ಆದರಿಂದ ಶುಕ್ರವಾರದ ಮರುದಿನ ಶನಿವಾರ.

Question 7: ನಿನ್ನೆಯ ಹಿಂದಿನ ದಿನ ಶನಿವಾರವಾಗಿದ್ದರೆ, ನಾಳೆಯ ಮರುದಿನ ಯಾವ ದಿನ ಬರುತ್ತದೆ ?
A)     ಬುಧವಾರ
B)     ಗುರುವಾರ
C)     ಸೋಮವಾರ
D)     ಮಂಗಳವಾರ
Explanation: ನಿನ್ನೆಯ ಹಿಂದಿನ ದಿನ ಶನಿವಾರ ವಾದರೆ, ನಿನ್ನೆಯ ದಿನ ರವಿವಾರ, ಇಂದು ಸೋಮವಾರ.
ನಾಳೆ ಮಂಗಳವಾರ, ನಾಳೆಯ ಮರುದಿನ ಬುಧವಾರ.

Question 8: ಪ್ರತೀಕ್‌ ತನ್ನ ಹುಟ್ಟುಹಬ್ಬವನ್ನು 14ನೇ ಏಪ್ರೀಲ್‌ 2024 ರವಿವಾರ ಆಚರಿಸಿಕೊಂಡರು. ಮುಂದಿನ ವರ್ಷ ಯಾವ     ದಿನದಂದು ಅವರು ತನ್ನ ಜನ್ಮದಿನವನ್ನು ಆಚರಿಸುತ್ತಾರೆ ?
A)     ರವಿವಾರ
B)     ಮಂಗಳವಾರ
C)     ಬುಧವಾರ
D)     ಸೋಮವಾರ
Explanation: 1 ವರ್ಷದಲ್ಲಿನ ಒಟ್ಟು ದಿನಗಳು = 365, ವಿಷಮ ದಿನಗಳು = 365/7 = 1 ದಿನ
ರವಿವಾರ + 1 ದಿನ = ಸೋಮವಾರ.

Question 9: 6 ವಾರ 8 ದಿನಗಳಲ್ಲಿ ಎಷ್ಟು ದಿನಗಳಿರುತ್ತವೆ ?
A)     64
B)     50
C)     48
D)     14
Explanation: ಒಂದು ವಾರದಲ್ಲಿ 7 ದಿನಗಳು. 6 ವಾರದಲ್ಲಿ 7 x 6 = 42 ದಿನಗಳು.
6 ವಾರಗಳು 8 ದಿನಗಳು = 42 + 8 = 50 ದಿನಗಳು.

Question 10: 26 ಜನವರಿ 1996 ರಿಂದ 15 ಮೇ 1996 ರವರೆಗೆ ಎಷ್ಟು ದಿನಗಳು ಇರುತ್ತವೆ ?
A)     111
B)     110
C)     112
D)     100
Explanation: 1996 ಅಧಿಕ ವರ್ಷ . ಒಟ್ಟು ದಿನಗಳ ಸಂಖ್ಯೆ = ಜನವರಿ(31-25=6) + ಫೆಬ್ರವರಿ(29) + ಮಾರ್ಚ್‌ + ಏಪ್ರಿಲ್‌ + ಮೇ
= 6 + 29 + 31 + 30 + 15 = 111.

Report Card

Total Questions Attempted: 0

Correct Answers: 0

Wrong Answers: 0

--



No comments

Powered by Blogger.