Header Ads

2020 - 21ನೇ ಸಾಲಿನ 6 ರಿಂದ 8ನೇ ತರಗತಿಗಳ ಪೂರ್ಣ ಪ್ರಮಾಣದ ಆರಂಭದ ಅಧಿಕೃತ ಆದೇಶ ಪ್ರಕಟ

 2020 - 21ನೇ ಸಾಲಿನ 6 ರಿಂದ 8ನೇ ತರಗತಿಗಳ ಪೂರ್ಣ ಪ್ರಮಾಣದ ಆರಂಭದ ಅಧಿಕೃತ ಆದೇಶ ಪ್ರಕಟ



ರಾಜ್ಯದಲ್ಲಿನ ಸರ್ಕಾರಿ, ಅನುದಾನಿತ ಮತ್ತು  ಅನುದಾನ ರಹಿತ  ಪ್ರೌಢ ಶಾಲೆಗಳಲ್ಲಿನ 6 ರಿಂದ 8 ನೇ ತರಗತಿ ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದಲ್ಲಿ ಶಾಲೆಗಳು ಪುನರಾರಂಭ ಮಾಡುವ ಕುರಿತು ಸರ್ಕಾರವು ಅಧಿಕೃತವಾದ ಆದೇಶವನ್ನು ಹೊರಡಿಸಿದೆ.

ಆದೇಶದ ಪ್ರಕಾರ ಈ ಕೆಳಗಿನಂತೆ ಕ್ರಮ ವಹಿಸಲು ಸೂಚಿಸಲಾಗಿದೆ.


  • ದಿನಾಂಕ 22 - 02 - 2021ರಿಂದ ಶಾಲೆಗಳಲ್ಲಿ ಅನುಸರಿಸುತ್ತಿರುವ ಸುರಕ್ಷ ಕ್ರಮಗಳನ್ನು ಮುಂದುವರಿಸಿ, ರಾಜ್ಯದಲ್ಲಿ 6, 7 ಮತ್ತು 8 ತರಗತಿಗಳನ್ನು ಪ್ರತಿದಿನ ಪೂರ್ನಾವಧಿ ತರಗತಿಗಳನ್ನು ಪ್ರಾರಂಭಿಸುವುದು.
  • ಬೆಂಗಳುರು ನಗರ ಬಿ.ಬಿ.ಎಮ್‌.ಪಿ  ವ್ಯಾಪ್ತಿಯಲ್ಲಿ ಹಾಗು ಕೇರಳ ಗಡಿಗೆ ಹೊಂದಿಕೊಂಡ ಪ್ರದೇಶಗಳಲ್ಲಿ 6 ರಿಂದ 7 ನೇ ತರಗತಿಗೆ ವಿದ್ಯಾಗಮ ಮುಂದುವರೆಸುವುದು.
  • ಹಾಸ್ಟಲ್‌ಗಳನ್ನು ನಡೆಸಲು ಸುರಕ್ಷ ಕ್ರಮಗಳನ್ನು ಕೈಗೊಂಡು ಪ್ರಾರಂಭಿಸುವುದು.
  • ವಿದ್ಯಾರ್ಥಿಗಳು ಮನೆಯಿಂದಲೆ ಮಧ್ಯಾಹ್ನದ ಊಟ/ ಉಪಹಾರ ತರುವಂತೆ ಸೂಚಿಸುವುದು.
  • ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯವಲ್ಲ.
  • ಶಾಲೆಗಳಿಗೆ ಹಾಜರಾಗಲು ಬಯಸದ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಅಥವಾ ಇತರೆ ವ್ಯವಸ್ಥೆಯನ್ನು ಮುಂದುವರೆಸಿಕೊಂಡು ಹೋಗುವುದು.





No comments

Powered by Blogger.