ಮಹಾತ್ಮ ಗಾಂಧೀಜಿ : ಅಹಿಂಸಾ ಪ್ರತಿಪಾದಕ ಪಕ್ಷಪಾತ ಮಾಡಿದರೆ ?
ಮಹಾತ್ಮ ಗಾಂಧೀಜಿ : ಅಹಿಂಸಾ ಪ್ರತಿಪಾದಕ
ಪಕ್ಷಪಾತ ಮಾಡಿದರೆ ?
ಸೌರಾಷ್ಟ್ರದ ಪೋರ್
ಬಂದರಿನಲ್ಲಿ ಮಧ್ಯಮ ವರ್ಗದ ವೈಶ್ಯ ವರ್ತಕರ ಕುಟುಂಬದಲ್ಲಿ 1869ನೇಯ ಅಕ್ಟೋಬರ್ 2 ರಂದು ಜನಿಸಿದ ಮೋಹನದಾಸ ಕರಮಚಂದ ಗಾಂಧಿ ಅವರು “ಮಹಾತ್ಮ ಗಾಂಧಿ” ಎಂದು ಪ್ರಸಿದ್ದರಾದರು.
ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿ, ಇಂಗ್ಲೆಂಡಿಗೆ ಹೋದ ಗಾಂಧಿ ಬ್ಯಾರಿಸ್ಟರ್ ಆದರು.
ಭಾರತಕ್ಕೆ ಹಿಂದುರಿಗಿದ ನಂತರ, ಅವರು ವೃತ್ತಿನಿರತರಾಗಿ ದಕ್ಷಿಣ ಆಪ್ರಿಕಾಕ್ಕೆ ಹೋದರು.
ಶೋಚನೀಯ ಸ್ಥಿತಿಯಲ್ಲಿದ್ದ ಭಾರತದ ಕಾರ್ಮಿಕರು, ಸ್ವಂತವಾಗಿ ಅನುಭವಿಸಿದ ಬೈಗುಳ, ಎಲ್ಲವೂ ಅವರನ್ನು ಕಾರ್ಮಿಕರ
ಒಳಿತಿಗಾಗಿ
ಕೆಲಸಮಾಡಿ ತೊಂದರೆಯನ್ನು ಬೇಕಾದರೂ ಅನುಭವಿಸಲು ಸಿದ್ದರಾಗುವಂತೆ ಪರಿವರ್ತಿಸಿತು. ಅವರ ಶಾಂತಪುರ್ಣ ಶಾಸನೋಲ್ಲಂಘನೆ – “ ಸತ್ಯಗ್ರಹ” ಅವರಿಗೆ ಹೆಸರು ಗೌರವ ಮತ್ತು ದಮನಗೊಂಡಿದ್ದ ಜನರ ಉಪಕಾರ ಸ್ಮರಣೆ ಎಲ್ಲವನ್ನು ದೊರಕಿಸಿತು.
ಬ್ರಿಟಿಷರಿಗಂತೂ ಗಾಂಧೀಜಿಯವರ ಪ್ರಯೋಗ ಪರೀಕ್ಷೆಯು ಒಂದು ಅಪೂರ್ವ ಅನಿಭವವೇ ಆಯಿತು.
ಅವರು ಗಾಂಧಿ ಅವರಲ್ಲಿ ಒಬ್ಬ ನಿಷ್ಟಾವಂತನೂ ನ್ಯಾಯಕ್ಕೆ ತಲೆಬಾಗುವವನು ಆದ ನಾಗರಿಕನನ್ನು
ಕಂಡರು. ಗಾಂಧೀಜಿ
ದಕ್ಷಿಣ ಆಪ್ರಿಕದ ಬ್ರಿಟಿಷ್ ಸರ್ಕಾರಕ್ಕೆ ಸಹಾಯ ಮಾಡಿ, ಕೆಲವು ಕಾಲದವರೆಗೆ, ಅವರು ಸೈನ್ಯದಲ್ಲಿದ್ದು ಬೋರ್ ಯುದ್ದದಲ್ಲಿ ಸೇವೆ ಸಲ್ಲಿಸಿದರು.
1914ರ ವರೆಗೂ ಗಾಂಧೀಜಿ
ದಕ್ಷಿಣ ಆಪ್ರಿಕದಲ್ಲಿದ್ದು, 1915ರ ಜನೆವರಿ ತಿಂಗಳಲ್ಲಿ ಭಾರತಕ್ಕೆ ವಾಪಾಸಾದರು. ಅಷ್ಟೋತ್ತಿಗೆ ಮಾಂಡ್ಲೆ ಜೈಲಿನಿಂದ ಲೋಕಮಾನ್ಯ ತಿಲಕರು ಬಿಡುಗಡೆ ಆಗಿ ಅವರು ಭಾರತಕ್ಕೆ ಹಿಂದುರಿಗಿದ್ದು ದೇಶದ ಅತ್ಯಂತ ಉಚ್ಛ ರಾಜನೀತಜ್ಞರಾಗಿದ್ದರು. ಆದರೆ ಗಾಂಧೀಜಿಗೆ,
ಹಾಗೆ ನೋಡಿದರೆ, ಭಾರತದಲ್ಲಿ ರಾಜ್ಯಾಡಳಿತದ ಖಾಸಗಿವೃಂದ ಯಾವುದು ಇರಲಿಲ್ಲ.
1919ರಲ್ಲಿ ನಡೆದ ಎರಡು ಘಟನೆಗಳು
1919ರಲ್ಲಿ ನಡೆದ ಎರಡು ಘಟನೆಗಳು ಗಾಂಧೀಜಿಯನ್ನು
ರಾಜಕೀಯದ ಸೂಳಿಯಲ್ಲಿ ಸಿಲುಕಿಸಿದವು.
ಮೊದಲನೆಯದು ಮುಸ್ಲಿಂ ಮುಲ್ಲಾಗಳು ಮತ್ತು ಅಲೀಘಡದ ಬುದ್ದಿಜೀವಿಗಳು ನಡೆಸಿದ ಖಿಲಾಫತ್ ಚಳುವಳಿ. ಅದರಲ್ಲಿ ಟರ್ಕಿಯ ಸಾಮ್ರಾಜ್ಯವನ್ನು ಒಂದು ಸಂಕೀರ್ಣ ರಚನೆಯ ಭಾಗವಲ್ಲದಂತೆ ಮಾಡಬೇಕೆಂಬ ಬ್ರಿಟಿಷರ ಪ್ರಯತ್ನವನ್ನು ಪ್ರತಿಭಟಿಸುವುದು ಮತ್ತು ಇಸ್ಲಾಮಿನ ಖಲೀಫನಾಗಿ ಇಸ್ಲಾಮಿ ಪ್ರಪಂಚದ ಮುಖಂಡತ್ವವನ್ನು ವಹಿಸಿದ್ದ ಟರ್ಕಿಯ ಸುಲ್ತಾನನನ್ನು ಪದಚ್ಯುತಿಗೊಳಿಸುವುದೂ ಆಗಿತ್ತು.
ಅರೇಬಿಯದ ಮುಸ್ಲಿಮರು, ಟರ್ಕಿಯ
ಸುಲ್ತಾನನನ್ನು ದುರಾಕ್ರಮಿ, ವಿದೇಶಿ ಪ್ರಭು ಮತ್ತು ಖಿಲಾಫತ್ತನ್ನು ಉಳಿಸುವುದರಲ್ಲಿ ನಿರಾಸಕ್ತನು ಎಂದು ಪರಿಗಣಿಸಿದ್ದರು. ಈ ವಿಚಾರದಲ್ಲಿ ಇಸ್ಲಾಂ ಧರ್ಮವನ್ನು ಆವರೆಗೂ ಹಗುರವಾಗಿಯೇ ಪರಿಗಣಿಸಿದ್ದ ಭಾರತೀಯ ಮುಸ್ಲಿಮರ ಅಭಿಪ್ರಾಯವೂ ಹಾಗೇ ಇತ್ತು.
ವಿದೇಶಿ ಮೂಲದ ಮುಸ್ಲಿಮರು ಚಿಕ್ಕ ಅಂಶದಷ್ಟಿದ್ದರು ಪ್ರಭಾವಶಾಲಿಗಳಾಗಿದ್ದರು. ಭಾರತದ ಮೇಲೆ ಇಸ್ಲಾಮಿನ ರಾಜ್ಯಭಾರದ ಕನಸು ಕಾಣುತ್ತಿದ್ದವರಾಗಿ, ಇದರಲ್ಲಿ ಆಸಕ್ತಿ ವಹಿಸಿದರು. ಅದರಿಂದಾಗಿ ಗಾಂಧಿ ಅವರನ್ನು ಈ ಕಾನ್ಫರೆನ್ಸಿಗೆ ಆಹ್ವಾನಿಸಲಾಗಿತ್ತು. ಇಸ್ಲಾಮಿನ ಚರಿತ್ರೆ ಹಾಗೂ ಮೂಲಭೂತ ಅಂಶಗಳನ್ನು ಅರಿಯದೆ, ಗಾಂಧಿಜಿ ತಮ್ಮ ಸಹಕಾರವನ್ನು ಅವರಿಗಿತ್ತರು. ಅದರೊಂದಿಗೆ
ಭಾರತದಲ್ಲಿನ ಬ್ರಿಟಿಷ್ ಸರಕಾರಕ್ಕೆ ವಿರುದ್ದವಾಗಿ , ಅಸಹಕಾರ ಮತ್ತು ಅಹಿಂಸೆಯ ಒಂದು ಕಾರ್ಯಕ್ರಮವನ್ನು ನಡೆಸುವಂತೆ ಉಪದೇಶವಿತ್ತರು. ಪರಿಣಾಮ ರೂಪವಾಗಿ ಅಸಹಕಾರ ನಿರ್ಣಯವು ಮೊಟ್ಟಮೊದಲಿಗೆ ಅಲ್ಲಿ ಪ್ರಾರಂಭವಾಯಿತು. ಮೊಹಮ್ಮದ್ ಅಲಿ, ಶೌಕತ್ ಅಲಿ
ಮತ್ತು ಅಬ್ದುಲ್ ಕಲಾಮ್ ಆಜಾದರಂಥ ಮೌಲಾನಾಗಳ ನೇತೃತ್ವದಲ್ಲಿದ್ದ ಖಿಲಾಫತ್ ಮುಸಲ್ಮಾನರಿಗೆ ಗಾಂಧಿಜಿ ಮುಖಂಡರಾದರು.
ಎರಡನೆಯದು ರೋಲೆಟ್ ಆಕ್ಟಗೆ ವಿರುದ್ದವಾಗಿ ನಡೆಯುತ್ತಿದ್ದ ಚಳುವಳಿಯನ್ನು ನಿಲ್ಲಿಸಲು ಬ್ರಿಟಿಷ್ ಸೇನೆಯುಚಜಲಿಯನ್ವಾಲಾ ಬಾಗ್ನಲ್ಲಿ ನಡೆಸಿದ ಹತ್ಯಾಕಾಂಡ. 1919ರ ಕೊನೆಯಲ್ಲಿ ಅಮೃತಸರದಲ್ಲಿ ಪಂಡಿತ ಮೋತಿಲಾಲ್ ನೆಹರು ಅವರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ಸಿನ ವಾರ್ಷಿಕ ಅಧಿವೇಶನದಲ್ಲಿ ಅವರು ಪಾಲ್ಗೊಂಡರು. ಅಧಿವೇಶನದ ಸ್ವಾಗತ ಸಮಿತಿಯ ಅಧ್ಯಕ್ಷರಾದ ಸ್ವಾಮಿ ಶ್ರದ್ದಾನಂದರು ಗಾಂಧಿಜಿಯವರಿಗೆ “ಮಹಾತ್ಮ” ಎಂಬ ಬಿರುದ್ದನ್ನು ಕೊಟ್ಟರು. ಆ ಬಿರುದು
ನಂತರ
ಅವರ ಹಿರಿಮೆಯ ದ್ಯೋತ್ಯಕವಾಯಿತು.
![]() |
| source : google |
ಗಾಂಧಿಜಿ, 1920ರ ಸೆಪ್ಟೆಂಬರ್ ತಿಂಗಳಿನಲ್ಲಿ ಕಲ್ಕತ್ತಾದಲ್ಲಿ ನಡೆದ ಕಾಂಗ್ರೆಸ್ಸಿನ ವಿಶೇಷ ಅಧಿವೇಶನದಲ್ಲಿ ಅಸಹಕಾರ ಚಳುವಳಿಯ ನಿರ್ಣಯವನ್ನು ಮಂಡಿಸಲು ಪ್ರಯತ್ನ ಪಟರು. ಆ ಅಧಿವೇಶನವು ಲಾಲ ಲಜಪತರಾಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತ್ತಾದರೂ ಅಧಿವೇಶನಕ್ಕೆ ಬಂದಿದ್ದ ಹೆಚ್ಚಿನವರು ಪ್ರತಿಭಟಿಸಸಿದರಿಂದ ಶ ನಿರ್ಣಯವನ್ನು ಅಂಗಿಕರಿಸಲಾಗಲಿಲ್ಲ. “ ವೇಲ್ಸ ರಾಜಕುಮಾರ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂಬ ಕಲ್ಪಿತ ವಿಚಾರವು , ಈ ಭೇಟಿಯ ಸಮಯದಲ್ಲಿ ಯಾವುದೇ ಹರತಾಳಗಳು, ಬೇಡದ ಪ್ರಸಂಗಗಳನ್ನು ತಡೆಯಲು ಬೇಕಾದ ಎಲ್ಲ ಉಪಶಮನಾಕಾರಕ ದೋರಣೆಯನ್ನು ಅಳವಡಿಸಿಕೊಳ್ಳಲು ಭಾರತ ಸರ್ಕಾರವನ್ನು ಪ್ರೇರೆಪಿಸಿತು. “ವೇಲ್ಸ್ ರಾಜಕುಮಾರನ ಭೇಟಿಯ ಸಮಯದಲ್ಲಿ ಯಾವುದೇ ಗಲಾಟೆಯು ಉಂಟಾಗುವುದಿಲ್ಲಿ” ಎಂಬ ಶರತ್ತಿನ ಮೇಲೆ ಎಲ್ಲ ರಾಜಕೀಯ ಖೈದಿಗಳನ್ನು ಬಿಡುಗಡೆ ಮಾಡಲು ಬ್ರಿಟಿಷ ಸರ್ಕಾರ ಒಪ್ಪಿಕೊಂಡಿದ್ದಾರೆ ಎಂಬ ವಿಷಯವನ್ನು ಪಂಡಿತ್ ಮದನ್ ಮೋಹನ ಮಾಳವೀಯರು ಗಾಂಧೀಜಿ ಅವರಿಗೆ ಸೂಚಿಸಿದ್ದರು ಆದರೆ ಜೈಲಿನಲ್ಲಿ ಸೆರೆಯಾಗಿರುವ ಅಲಿ ಸಹೊದರರನ್ನು ಬಿಡಲು ಸಾದ್ಯವಿಲ್ಲ ಎಂದಾಗ , ಆ ಚಿಕ್ಕ ಕಾರಣಕ್ಕಾಗಿ ಗಾಂಧೀಜಿ ಮಾಳವಿಐವರ ಈ ಮಂಡನೆಯನ್ನು ಒಪ್ಪಿಕೊಳ್ಳಲಿಲ್ಲ. ಹೀಗೆ ಪಟ್ಟು ಬಿಡದೆ ಗಾಂಧೀಜಿ 1921ರಲ್ಲಿ ದೊರೆಯಬೇಕ್ಕಿದ್ದ ಕಾಮನ್ವೆಲ್ತಗೆ ಸೇರಿದ್ದ ಸ್ವತಂತ್ರ ರಾಷ್ಟ್ರಗಳ ಬಿರುದ್ದನ್ನು ಹೊಂದಬೇಕ್ಕಿದ್ದ ಭಾರತಕ್ಕೆ ಸ್ವಾತಂತ್ರ್ಯವನ್ನು ತಪ್ಪಿಸಿ ಬುಡಮೇಲು ಮಾಡಿದರು.
ಅಷ್ಟರಲ್ಲಿ ಕಮಲ್
ಆತಾಟರ್ಕ್ ಎಂಬಾತನ ನೇತೃತ್ವದಲ್ಲಿ ಟರ್ಕಿ ಯುವಕರಿಂದ ನಡೆಸಲ್ಪಟ್ಟ ದಂಗೆಯು, ಸುಲ್ತಾನರನ್ನು ಮತ್ತು ಖಿಲಾಫತ್ರನ್ನು ಒಂದೇ ಏಟಿನ್ನಲ್ಲಿ ಕಬಳಿಸಿತು.
ಇದು ಭಾರತದ ಖಿಲಾಫತ್ ಚಳುವಳಿಯನ್ನು
ಫಲಹೀನವಾಗಿಸಿತು. ಬ್ರಿಟಿಷ್ರ ವಿರುದ್ದ ಸೃಸ್ಟಿಸಿದ್ದ ಜಿಹಾದ್ನ ಉದ್ರೇಕವು ಭಾರತದ ಹಿಂದೂ ಕಾಫಿರರ ಕಡೆಗೆ ತಿರುಗಿತು. ಅದರ ಪರಿಣಾಮವಾಗಿ ಮಲಬಾರಿನಲ್ಲಿದ್ದ ಭಾರತೀಯರ ಸಾಮೂಹಿಕ ಕೊಲೆ ನಡೆಯಿತು.
ಎಲ್ಲಾ ಭಾರತೀಯ ಮುಸ್ಲಿಮರನ್ನೂ ತನ್ನ ಪರಧಿಯೊಳಕ್ಕೆ ಸೇರಿಸಿಕೊಂಡ ಖಿಲಾಫತ್ ಚಳುವಳಿಯು ಬೀರಿದ
ಪ್ರಭಾವವು ಮುಲ್ಲಾಗಳು ಮತ್ತು ಮೌಲಾನಗಳ ನೆತೃತ್ವದಲ್ಲಿ ಮುಸ್ಲಿಮ್ ಜನೆತೆಯನ್ನು ರಾಜಕಾರಣದಲ್ಲಿ ತೊಡಗಿಸಿದ್ದೇ ಆಗಿತ್ತು. ಭಾರತದಲ್ಲಿನ ಆಗಿನ ಮುಸ್ಲಿಂ ರಾಜಕೀಯಕ್ಕೆ ಅದೇ ಆಧಾರವಾಯಿತು ಮತ್ತು ಭಾರತದ ರಾಜಕೀಯಕ್ಕೆ ಹೊಸ ಆಕಾರ ಹಾಗೂ ತಿರುವು ಬಂದೊದಗಿತು.
ಹಿಂದೂ ಮುಸ್ಲಿಂ ಐಕ್ಯತೆಯೇ ಸ್ವಾತಂತ್ರ್ಯವನ್ನು ಪಡೆಯಲು ಬೇಕಾಗಿರುವ ಒಂದು ಅವಶ್ಯಕವಾದ ಕರಾರು ಎಂದು ಗಾಂಧೀಜಿ ಒತ್ತಾಯಮಾಡಿದ್ದಂತೂ ಬ್ರಟಿಷ್ರಿಗೆ ಅತ್ಯಂತ ಅಪ್ಯಾಯಮಾನವಾಗಿತ್ತು. ಗಾಂಧೀಜಿ ಮತ್ತು ಬ್ರಿಟಿಷ್ರ ನಡುವೆ ಪಂದ್ಯವು ಹೀಗೆ ಪ್ರಾರಂಭವಾಯಿತು.
ಮುಸ್ಲಿಮರಿಗೆ ಒಂದು ಬೇರೆಯೇ ಆದ ಸರ್ವೋತ್ತಮ
ತಾಯಿನಾಡನ್ನು ಭಾರತದ ನೈಸರ್ಗಿಕ ಸೀಮಾರೇಖೆಯೊಳಗೇ ಸೃಷ್ಟಿಸಿ, ಮತಿಯ ದೃಷ್ಟಿಯಿಂದ ಭಾರತದ ವಿಭಜನೆಗೆ ಒತ್ತಾಯಪಡಿಸುವುದೇ, ಬ್ರಿಟಿಷ್ ಸರ್ಕಾರದ ತಾರ್ಕಿಕ ನಿರ್ಣಯವಾಗಿತ್ತು. ಅದು ಮುಸ್ಲಿಂಲೀಗ್ನ್ನು ಅವರ ವಭಜನಾತ್ಮಕ ಬೇಡಿಕೆಗಕೆಗಳಗೆ ಬಲವಂತ ಮಾಡಲು ಪ್ರೋತ್ಸಾಯಿಸಿತು. ಜೊತೆಗೆ ಮುಸ್ಲಿಂ ಲೀಗ್ಗೆ ಪಾಕೀಸ್ತಾನದ ರೂಪದಲ್ಲಿ ಒಂದು ತುಂಡು ಮಾಂಸವನ್ನು ಕೊಡದೆ ಇದ್ದಲ್ಲಿ ಭಾರತಕ್ಕೆ ಸ್ವಾತಂತ್ರ್ಯ ದೊರಕುವುದು ಅಸಾಧ್ಯ ಎಂಬ ಭಾವನೆಯನ್ನು ಭಾರತೀಯರ ಮುಖಂಡರಲ್ಲಿ ಮೂಡಿಸಿದರು.
ಗಾಂಧಿ ಅವರು ಮಾಡಿದ ಒಂದು ಅನ್ಯಾಯವೆಂದರೆ, ಪ್ರಾಂತೀಯ ಕಾಂಗ್ರೆಸ್ ಸಮಿತಿಯವರು ಸರ್ವಾನುಮತದಿಂದ ಸರ್ದಾರ್ ಪಟೇಲರನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡವ ಸಂಭವವಿದ್ದು, ಅವರಿಗೇ ಭಾರತದ ಪ್ರಾಧಾನ ಮಂತ್ರಿಯ ಸ್ಥಾನ ಖಚಿತ ಎಂದು ತಿಳಿದಾಗ, ಜವಹರ್ ಲಾಲ್ ನೆಹರೂ ಅವರಿಗಾಗಿ ಪಟೇಲರನ್ನು ಹಿಮ್ಮೆಟ್ಟುವಂತೆ ಪುಸಲಾಯಿಸಿ, ನೆಹರೂ ಅವರನ್ನೇ ಒಂದು ಭಾಗ ಕತ್ತರಿಸಿ ತುಂಡಾಗಿದ್ದ ಭಾರತಕ್ಕೆ ಮೊದಲನೆಯ ಪ್ರಧಾನ ಮಂತ್ರಿಯನ್ನಾಗಿ ಮಾಡಿದ್ದು.
ʼಕರ್ಜನ್ ಟು
ನೆಹರುʼ ಎಂಬ ಪುಸ್ತಕದ ರಚನರ್ಕತ ದುರ್ಗಾದಾಸರ ಪ್ರಕಾರ, ಗಾಂಧಿ, ʼನೇಹರು ಅವರನ್ನು ಕಾಂಗ್ರೇಸ್ ದಳದ ಏಕೈಕ ಇಂಗ್ಲಿಷ್ ಮನುಷ್ಯʼ ಎಂದು ಪರಿಗಣಿಸಿದ್ದರಂತೆ.
'ಎಲ್ಲಾ ಪರಿಸ್ಥಿತಿಗಳಲ್ಲಿಯೂ ಅಹಿಂಸಾ ಸಿದ್ದಾಂತವನ್ನೇ ಅನುಸರಿಸಬೇಕುʼ ಎಂಬ ಅವರ ಬಲವಂತ, ಹಿಂದೂಗಳ ಮೇಲೆ ನಕಾರಾತ್ಮಕ ಹಾಗೂ ಸ್ಥೈರ್ಯಗೆಡಿಸುವ ಪ್ರಾಭಾವವನ್ನು ಬೀರಿತು.
ಕಾಂಗೇಸ್ ಪಕ್ಷವು
1946ರಲ್ಲಿ
, ಮುಸ್ಲಿಂ ಲೀಗ್ ನಡೆಸಿದ ನೇರ ಅಕ್ರಮಣಕ್ಕೆ ಮರು ಆಕ್ರಮಣ ಮಾಡಿ ಎದುರಿಸಿದ್ದಿದ್ದರೆ, ದೇಶದ ವಿಭಜನೆಯನ್ನು ನಿಜವಾಗಲೂ ತಡೆಯಲು ಸಾಧ್ಯವಾಗುತ್ತಿತ್ತು.
ʼಗಾಂಧಿಜಿ ತಮ್ಮ ದೇಹದ ವಿಭಜನೆಯಾಗಲಿ ಆದರೆ ದೇಶದ ವಿಭಜನೆಗೆ ಅವಕಾಶವಿಲ್ಲʼ ಎಂದು ಘೋಷಿಸಿದ್ದರು. ಆದರೆ ವಿಭಜನೆ ಆದಾಗ, ಕಾಂಗ್ರೆಸನ್ನು ತಡೆಯಲು, ತಮ್ಮ ಸಾಮನ್ಯ ಅಸ್ತ್ರವಾಗಿದ್ದ ʼಅಮರಣಾಂತ ಉಪವಾಸʼದ ಪ್ರಯೋಗವನ್ನು ಮಾಡಲೆ ಇಲ್ಲ. ಆದರೂ ಭಾರತ ಸರ್ಕಾರವು ಪಾಕೀಸ್ತಾನಕ್ಕೆ 54 ಕೋಟಿ ರೂಪಾಯಿಗಳನ್ನು ನೀಡಬೇಕೆಂದು ಬಲವಂತಮಾಡಿದರು. ಜೊತೆಗೆ ಕೊಡದೇ ಇದ್ದರೆ ಅಮರಣಾಂತ ಉಪವಾಸ ಮಾಡುವುದಾಗಿ ಘೋಷಿಸಿದ್ದರು. ಮುಸ್ಲಿಂರನ್ನು ಭಾರತವನ್ನು ಬಿಟ್ಟು ಹೋಗದಂತೆ ಒಲಿಸಲು ಬಹಳವಾಗಿ ಶ್ರಮಿಸಿದರು. ಅವರ ಈ ನಡತೆ ದೇಶಬಕ್ತ ಅನುಯಾಯಿಗಳಿಗೆ ಬೇಸರ ಮತ್ತು ನಿರಾಸೆಯನ್ನುಂಟು ಮಾಡಿಸಿತು. ಮುಸಲ್ಮಾನರನ್ನು ಸಮಾದಾನಗೋಳಿಸುವ ಅವರ ಕಾರ್ಯಾನೀತಿ ಮತ್ತು ನಿಜವಲ್ಲದ ಜಾತ್ಯಾತೀತತೆಯ ಒಳ ಅರಿವು, ಹಿಂದೂ ಧರ್ಮಕ್ಕೂ ಮತ್ತು ಹಿಂದೂಸ್ತಾನಕ್ಕೂ ಕೆಡಕನ್ನು ಅನ್ಯಾಯವನ್ನೂ ಮಾಡಿಸಿತು.
ಹಿಂದೂಸ್ತಾನದ ವಿಭಜನೆಯಿಂದ ಗಾಂಧೀಜಿ ಅವರ ನೈತಿಕ ಸಾವೇ ಉಂಟಾಗಿತ್ತು. ಆದರೂ ಅವರ ದೈಹಿಕ ಸಾವು, ಅದಾದ ಕೆಲವು
ತಿಂಗಳುಗಳ
ನಂತರ,
ಅಂದರೆ
1948ನೆಯ ಜನೆವರಿ 30ರಂದು ನಾಥೂರಾಂಗೋಡ್ಸೆ ಅವರ ಕೈಗಳಿಂದ ಉಂಟಾಯಿತು.
ಗೋಡ್ಸೆ ಅಸಮ್ಮತಿಯಿಂದಲೇ ಅವರ ಅತ್ಯಂತ ಹಿರಿಯ ಆಪದ್ಭಾಂಧವರಾದರು. ಜನರಿಂದ ಹಾಗು ಸರ್ಕಾರದಿಂದ ಕಡೆಗಣಿಸಲ್ಪಟ್ಟಿದ್ದ ಸೋತ ಹಾಗೂ ಅಲಕ್ಷಿಸಲ್ಪಟ್ಟಿದ್ದ ನಾಯಕ ಮಹಾತ್ಮ ಗಾಂಧೀಜಿ
ನೂತನ ಉದ್ದಾರಕರಾದರು.



No comments