School Opening - ಶಾಲಾ ಕಾಲೇಜುಗಳ ಪ್ರಾರಂಭದ ಕುರಿತು ಆದೇಶ
School Opening - ಶಾಲಾ ಕಾಲೇಜುಗಳ ಪ್ರಾರಂಭದ ಕುರಿತು ಆದೇಶ
ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಛೇರಿ ಬೆಂಗಳೂರು ಇವರಿಂದ ಶಾಲಾ ಕಾಳೆಜುಗಳ ಪ್ರಾರಂಭಕ್ಕೆ ಸಂಬಂದಿಸಿದಂತೆ ಆದೇಶ ನೀಡಲಾಗಿದೆ.
ಕೋವಿಡ್ - 19 ಹಿನ್ನೆಲೆಯಲ್ಲಿ ರಾಜ್ಯದ ಸರಕಾರಿ ಅನುದಾನಿತ ಅನುದಾನ ರಹಿತ ಶಾಲಾ ಕಾಲೇಜುಗಳ ಪ್ರಾರಂಭಿಸುವ ಬಗ್ಗೆ ಕೇಂದ್ರ ಸರಕಾರದ ಗೃಹ ಮಂತ್ರಾಲಯದ ಮಾರ್ಗಸೂಚಿ ದಿನಾಂಕ 29-08-2020 ರಲ್ಲಿ ಮಾರ್ಗಸೂಚಿಯಂತೆ ಕಂಟೈನ್ಮೆಂಟ್ ಜೋನ್ ಹೊರತುಪಡಿಸಿ ಒಂಬತ್ತನೇ ತರಗತಿಯಿಂದ ಹನ್ನೆರಡನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಶಾಲೆಯನ್ನು ದಿನಾಂಕ : 21-09-2020 ರಂದು ತೆರೆದು ವಿದ್ಯಾರ್ಥಿಗಳು ಸಂದೇಹ ಪರಿಹಾರಕ್ಕಾಗಿ ಶಾಲೆಗಳಿಗೆಬೇಟಿ ನೀಡಬಹುದೆಂದು ಅನುಮತಿ ನೀಡಲಾಗಿತ್ತು.
ಆದರೆ ಕರ್ನಾಟಕದಲ್ಲಿ ಕೋವಿಡ್ -19 ಹಬ್ಬುತ್ತಿರುವ ಪ್ರಮಾಣ ಕಡಿಮೆಯಾಗದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ಅಂತ್ಯದವರೆಗು ಶಾಲಾ ಕಾಲೇಜುಗಳಿಗೆ ಭೇಟಿ ನೀಡಲು ಅನುಮತಿ ನೀರಾಕರಿಸಲಾಗಿತ್ತು.
ಈ ಸಂಬಂಧ ವಿವರವಾಗಿ ಪರಿಶೀಲಿಸಿದ ನಂತರ ಕರ್ನಾಟಕ ರಾಜ್ಯದಲ್ಲಿ ಪ್ರಸ್ತುತ ಹಂತದಲ್ಲಿಯು ಸಹ ಕೋವಿಡ್ -19 ಕಡಿಮೆ ಯಾಗದಿರುವ ಕಾರಂ ಶಾಲೆಗಳಿಗೆ ವಿದ್ಯಾರ್ಥಿಗಳು ಬರುವುದು ಕ್ಷೇಮಕರವಲ್ಲ ಎಂದು ಅಭಿಪ್ರಾಯ ಪಡಲಾಗಿದೆ.
ಆದ ಕಾರಣ 15-10-2020 ರವರೆಗೆ ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ಭೇಟಿ ನೀಡಲು ಅನುಮತಿ ನೀಡದಿರಲು ತೀರ್ಮಾನಿಸಲಾಗಿದೆ. ಎಂದು ಮಾನ್ಯ ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ ಇವರು ಆದೇಶ ನೀಡಿರುತ್ತಾರೆ.


No comments