Header Ads

TEACHER TRANSFER : 17 ಕ್ಕೆ ಶಿಕ್ಷಕರ ವರ್ಗಾವಣೆ ಪ್ರಾರಂಭ

 TEACHER TRANSFER : 17 ಕ್ಕೆ ಶಿಕ್ಷಕರ ವರ್ಗಾವಣೆ ಪ್ರಾರಂಭ



ಬಹುದಿನಗಳ ಕನಸಾಗಿರುವ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯು ಪ್ರಾರಂಭ ಮಾಡಲು ಶಿಕ್ಷಣ ಇಲಾಖೆ ನಿರ್ಧಸಿದೆ. ಇದರಿಂದ ಸರ್ಕಾರವು ಶಿಕ್ಷಕರಿಗೆ ದೀಪಾವಳಿಯ ಉಡುಗೊರೆ ನೀಡಿದೆ. ಹೊಸದಾಗಿ ಜಾರಿಗೆ ತಂದಿರುವ ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳು ( ಶಿಕ್ಷಕರ ವರ್ಗಾವಣೆ ನಿಯಂತ್ರಣ ) ಅಧಿನಿಯಮ 2020ರ ನಿಯಮದಂತೆ ಈ ವರ್ಗಾವಣೆ ಪ್ರಕ್ರಿಯೆಯು ನಡೆಯುತ್ತದೆ.
2019-20ನೇ ಸಾಲಿನಲ್ಲಿ ಕಡ್ಡಾಯ/ಹೆಚ್ಚುವರಿಯಾಗಿ ತಾಲೂಕು, ಜಿಲ್ಲೆಯಿಂದ ಹೊರಗೆ ವರ್ಗಾವಣೆ ಆಗಿರುವ ಸರ್ಕಾರಿ ಶಾಲಾ ಶಿಕ್ಷಕರಿಗೆ ಗಣಕೀಕೃತ ಕೌನ್ಸೆಲಿಂಗ್‌ ಮೂಲಕ ಮೊದಲಿಗೆ ವರ್ಗಾವಣೆ ನೀಡಲು ಆದೇಶಿಸಲಾಗಿದೆ. ಇದರ ಜೊತೆಯಲ್ಲೆ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆ ಕೂಡ ನವೆಂಬರ 17 ರಿಂದ ಆರಂಭವಾಗಲಿದೆ. ಶಿಕ್ಷಕಮಿತ್ರ ಆಪ್‌ ಮೂಲಕ ವರ್ಗಾವಣೆ ಪ್ರಕ್ರಿಯೆ ನಡೆಯುವುದು ಮತ್ತೊಂದು ವಿಶೇಷವಾಗಿದೆ.

ಅರ್ಜಿ ಸಲ್ಲಿಕೆಯ ಕ್ರಮ ಮತ್ತು ಅರ್ಜಿ ಹೇಗೆ ಸಲ್ಲಿಸುವುದು.

  • ಶಿಕ್ಷಕರ ಕಾಯಂಪೂರ್ವ ಸೇವಾ ಅವಧಿ ತೃಪ್ತಿಕರವಾಗಿರಬೇಕು
  • ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಸೇವೆಸಲ್ಲಿಸುತ್ತಿರುವ ಶಿಕ್ಷಕರು ಆ ಪ್ರದೇಶದ ಹೋರಗೆ ವರ್ಗಾವಣೆ ಬಯಸಿದ್ದರೆ ಕನಿಷ್ಟ 10 ವರ್ಷ ಸೇವೆ ಸಲ್ಲಿಸಿರಬೇಕು
  • ವರ್ಗಾವಣೆಗೆ ಅರ್ಜಿ ಸಲ್ಲಿಸುವವರು ನಿಗದಿತ ದಿನಾಂಕದೊಳಗೆ ಶಿಕ್ಷಕಮಿತ್ರ/ ಇಇಡಿಸ್‌ ಮುಖಾಂತರ ಅರ್ಜಿ ಸಲ್ಲಿಸಬೇಕು
  • ಜಿಲ್ಲೆಯೊಳಗಿನ ಅಥವಾ ಒಂದು ಘಟಕದಿಂದ ಮತ್ತೊಂದು ಘಟಕಕ್ಕೆ ವರ್ಗಾವಣೆ ಬಯಸುವವರು ನಿಗದಿಪಡಿಸಿದ ಸೇವೆಯನ್ನು ಪೂರ್ಣಗೋಳಿಸಿರಬೇಕು.
ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ನ್ನು ಕ್ಲಿಕ್‌ ಮಾಡಿ



No comments

Powered by Blogger.