School Reopening: ಶಾಲೆಗಳ ಪುನಾರಂಭಕ್ಕೆ ಸಿದ್ಧತೆ; ಸರಣಿ ಸಭೆ ನಡೆಸಲು ಮುಂದಾದ ಶಿಕ್ಷಣ ಇಲಾಖೆ
School Reopening: ಶಾಲೆಗಳ ಪುನಾರಂಭಕ್ಕೆ ಸಿದ್ಧತೆ; ಸರಣಿ ಸಭೆ ನಡೆಸಲು ಮುಂದಾದ ಶಿಕ್ಷಣ ಇಲಾಖೆ
ಶಿಕ್ಷಣ ಇಲಾಖೆ ಈ
ಕುರಿತು ಅಧಿಕಾರಿಗಳೊಂದಿಗೆ ನಾಳೆಯಿಂದ ಮೂರು ದಿನಗಳ ಕಾಲ ಸಭೆ ನಡೆಸಲಿದೆ. ಕಳೆದ 18ದಿನಗಳಿಂದ ರಾಜ್ಯದಲ್ಲಿ ಕೊರೋನಾ ಪ್ರಕರಣಗಳು
ಕಡಿಮೆಯಾಗುತ್ತಿದೆ. ಈ ಹಿನ್ನಲೆ ಶಾಲೆ ಪುನರ್ ಆರಂಭ ಕುರಿತು ತಜ್ಞರೊಂದಿಗೆ ಸಭೆ
ನಡೆಸಲಿದ್ದಾರೆ.
ಬೆಂಗಳೂರು (ನ.3): ಕೊರೋನಾ ಸಂಕಷ್ಟದ ಸಮಯದಲ್ಲಿ ಶಾಲಾ-ಕಾಲೇಜುಗಳ ಪುನರ್ಆರಂಭದ ಕುರಿತು ವಿರೋಧ ವ್ಯಕ್ತವಾಗುತ್ತಿದೆ. ಆದರೆ, ಶಿಕ್ಷಣ ಇಲಾಖೆ ಮಾತ್ರ ಶಾಲೆ ತೆರೆಯುವ ಕುರಿತು ಚಿಂತನೆ ನಡೆಸುತ್ತಲೇ ಇದೆ. ಈಗ ನೆರೆಯ ರಾಜ್ಯಗಳಲ್ಲಿ ಶಾಲಾ-ಕಾಲೇಜು ಪುನರ್ ಆರಂಭವಾಗಿರುವುದು ಇದಕ್ಕೆ ಇನ್ನಷ್ಟು ಪುಷ್ಟಿ ಸಿಕ್ಕಿದೆ. ಈ ಹಿನ್ನಲೆ ರಾಜ್ಯದಲ್ಲಿ ಕೂಡ ಶಾಲೆ ತೆರೆಯುವ ಕುರಿತು ಚಿಂತನೆ ನಡೆಸಲಾಗಿದೆ. ಈ ಕುರಿತು ಸರಣಿ ಸಭೆ ನಡೆಸಲು ಶಿಕ್ಷಣ ಸಚಿವ ಸುರೇಶ್ ಕುಮಾರ್ಮುಂದಾಗಿದ್ದಾರೆ. ಕಳೆದ ಅಕ್ಟೋಬರ್ನಲ್ಲಿ ಶಾಲೆ ಪುನರ್ ಆರಂಭ ಕುರಿತು ದಿನಾಂಕ ನಿಗದಿಗೊಳಿಸಲಾಗಿತ್ತು. ಸೋಂಕು ಹೆಚ್ಚಳ ಪ್ರಕರಣ ಜೊತೆ ವಿರೋಧ ವ್ಯಕ್ತವಾದ ಹಿನ್ನಲೆ ಈ ನಿರ್ಧಾರವನ್ನು ಕೈ ಬಿಡಲಾಗಿತ್ತು. ಈಗ ಮತ್ತೆ ಶಾಲೆ ತೆರೆಯುವ ಚಿಂತನೆ ನಡೆದಿದ್ದು ಈ ಸಂಬಂಧ ಇಲಾಖೆ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ನಾಳೆ ಸಚಿವರು ಸಭೆ ನಡೆಸಲು ಮುಂದಾಗಿದ್ದಾರೆ. ನೆರೆಯ ಆಂಧ್ರದಲ್ಲಿ ಸೋಮವಾರದಿಂದ 9ನೇ ತರಗತಿಯಿಂದ 12ನೇ ತರಗತಿವರೆಗಿನ ಶಾಲೆಗಳ ಪುನರ್ ಆರಂಭ ನಡೆಸಲಾಗಿದೆ. ಇದರಿಂದ ರಾಜ್ಯಲ್ಲಿ ಕೂಡ ಶಾಲೆ ತೆರೆಯಲೇಬೇಕು ಎಂಬ ಉದ್ದೇಶದಿಂದ ಈ ಸಭೆ ಆಯೋಜಿಸಲಾಗಿದೆ.
ಈ ಹಿಂದೆ ಆದ ರೀತಿ
ದಿನಾಂಕ ಪ್ರಕಟಿಸಿ ಮತ್ತೆ ಹಿಂದೆ ಸರಿಯುವುದು ಬೇಡ ಎಂದು ತೀರ್ಮಾನಿಸಿರುವ ಶಿಕ್ಷಣ ಇಲಾಖೆ ಈ
ಕುರಿತು ಅಧಿಕಾರಿಗಳೊಂದಿಗೆ ನಾಳೆಯಿಂದ ಮೂರು ದಿನಗಳ ಕಾಲ ಸಭೆ ನಡೆಸಲಿದೆ. ಕಳೆದ 18ದಿನಗಳಿಂದ ರಾಜ್ಯದಲ್ಲಿ ಕೊರೋನಾ ಪ್ರಕರಣಗಳು
ಕಡಿಮೆಯಾಗುತ್ತಿದೆ. ಈ ಹಿನ್ನಲೆ ಶಾಲೆ ಪುನರ್ ಆರಂಭ ಕುರಿತು ತಜ್ಞರೊಂದಿಗೆ ಸಭೆ
ನಡೆಸಲಿದ್ದಾರೆ.
ಈ ಕುರಿತು ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಆಂಧ್ರಪ್ರದೇಶದ ಮಾದರಿಯನ್ನು ಗಂಭೀರವಾಗಿ ಅಧ್ಯಯನ ನಡೆಸುತ್ತಿದ್ದೇವೆ. ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ವಿದ್ಯಾರ್ಥಿಗಳ ಜೀವನದ ಪ್ರಶ್ನೆ ಇದಾಗಿದೆ. ಈ ಹಿನ್ನಲೆ ಎಲ್ಲಾ ದೃಷ್ಟಿಕೋನದಲ್ಲಿಯೂ ಪರೀಕ್ಷಿಸಲಾಗುವುದು. ರಾಜ್ಯದಲ್ಲಿ ಸೋಂಕಿನ ಪ್ರಮಾಣ ತಗ್ಗಿದ್ದು, ನ.17ರಿಂದ ಕಾಲೇಜು ಪುನರ್ ಆರಂಭಿಸಲು ಸರ್ಕಾರ ಸಮ್ಮತಿಸಿದೆ ಎಂದರು.
ಶಾಲೆಗಳನ್ನು ಹಂತ ಹಂತವಾಗಿ ತೆರೆಯುವುದು ಉತ್ತಮ ಎಂಬ ಅಭಿಪ್ರಾಯ ತಜ್ಞರಿಂದ ಬಂದಿದೆ. ಆನ್ಲೈನ್ನಿಂದಾಗಿ ಪ್ರತಿಯೊಬ್ಬ ವಿದ್ಯಾರ್ಥಿ ಶಿಕ್ಷಣ ಪಡೆಯುವುದು ಸಾಧ್ಯವಿಲ್ಲ. ಈ ಹಿನ್ನಲೆ ಇದಕ್ಕೂ ಮುನ್ನ ನಾವು ಮಾಹಿತಿ ಸಂಗ್ರಹಿಸಿ ವಿದ್ಯಾರ್ಥಿ, ಶಿಕ್ಷಕರ ಆರೋಗ್ಯವನ್ನು ಗಮನದಲ್ಲಿರಿಸಿ ಈ ಸಭೆ ನಡೆಸಲಾಗುವುದು ಎಂದರು.
ದೀರ್ಘಕಾಲದವರೆಗೆ
ಶಾಲೆಗಳನ್ನು ಮುಚ್ಚಿದರೆ ವಿದ್ಯಾರ್ಥಿಗಳ ಮನಸ್ಸುನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು
ತಜ್ಞರು ಭಾವಿಸುತ್ತಾರೆ. ಆದ್ದರಿಂದ ಅಂತಿಮ ತೀರ್ಮಾನಕ್ಕೆ ಬರುವ ಮೊದಲು ಎಲ್ಲಾ ವಿಷಯಗಳ ಕುರಿತು
ಪರಿಶೀಲಿಸುತ್ತಿದ್ದೇವೆ.
ಈ ಹಿಂದೆ ಅ.11 ರಂದು ಶಾಲೆ ತೆರೆಯುವ ಕುರಿತು ಚರ್ಚೆಗಳು
ನಡೆದಿದ್ದವು. ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಪೂರ್ಣಗೊಳಿಸುವ ಕುರಿತು ಚಿಂತನೆ
ನಡೆಸಲಾಗಿತ್ತು ಈ ಸಂದರ್ಭದಲ್ಲಿ ಕೋವಿಡ್ ಪ್ರಕರಣ ಹೆಚ್ಚಾದ ಹಿನ್ನಲೆ ಮುಖ್ಯಮಂತ್ರಿ ಬಿಎಸ್
ಯಡಿಯೂರಪ್ಪ ಅವರು, ವಿದ್ಯಾರ್ಥಿ ಮತ್ತು
ಮೂರು ವಾರಗಳ ರಜೆ ಘೋಷಿಸಿದರು.


No comments