ಶಾಲಾರಂಭಕ್ಕೆ ಕ್ಷಣಗಣನೆ - ಕೇಂದ್ರದಿಂದ ಮಾರ್ಗಸೂಚಿ ಪ್ರಕಟ
ಶಾಲಾರಂಭಕ್ಕೆ ಕ್ಷಣಗಣನೆ - ಕೇಂದ್ರದಿಂದ ಮಾರ್ಗಸೂಚಿ ಪ್ರಕಟ
![]() |
| Source : google |
ಅನ್‌ಲಾಕ್ - 4ನೇ ಹಂತದ ಭಾಗವಾಗಿ ಸೆಪ್ಟೆಂಬರ್ 21 ರಿಂದ ಶಾಲಾ ಕಾಲೇಜುಗಳ 9ನೇ ತರಗತಿಯಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ತರಗತಿಗಳಿಗೆ ಹಾಜರಾಗಲು ಅವಕಾಶ ಕಲ್ಪಿಸಿ ಕೊಡಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರವು ಮಾರ್ಗಸೂಚಿಯಲ್ಲಿ ಕೇಲವು ಶರತ್ತುಗಳನ್ನು ವಿಧಿಸಿ ಆದೇಸಿಸಿದೆ.
ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (SOP) ಬಿಡುಗಡೆ ಮಾಡಿರುವ ಸಚಿವಾಲಯವು ಪ್ರತೇಕ ಸಮಯಗಳಲ್ಲಿ ತರಗತಿಗಳನ್ನು ಸುರಕ್ಷತಾ ಕ್ರಮಗಳೊಂದಿಗೆ ನಡೆಸಲು ಸೂಚಿಸಿದೆ.
ತರಗತಿಗಳಿಗೆ ಹಾಜರಾಗಲು ಬಯಸುವ ವಿದ್ಯಾರ್ಥಿಗಳು ಸ್ವಯಂ ಪ್ರೇರಿತವಾಗಿ ಮತ್ತು ತಮ್ಮ ಪೋಷಕರ ಒಪ್ಪಿಗೆ ಪತ್ರ ಪಡೆದು ತರಗತಿಗಳಿಗೆ ಹಾಜರಾಗಬಹುದಾಗಿದೆ.
![]() |
| Source : google |
ಮಾರ್ಗ ಸೂಚಿಯಲ್ಲಿ ಏನೆಲ್ಲಾ ಅಂಶಗಳಿವೆ ?
ಶಾಲೆಗಳಲ್ಲಿ ವಿದ್ಯಾರ್ಥಿಗಳ ನಡುವೆ ಕನಿಷ್ಟ 6 ಅಡಿಗಳಷ್ಟು ಅಂತರವಿರಬೇಕು.
ಎಲ್ಲರೂ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಬೇಕು ( ಶಿಕ್ಷಕರು ಮತ್ತು ವಿದ್ಯಾರ್ಥಿಗಳು)
ಆಗಾಗ ಕೈ ಯನ್ನು ಸೊಪಿನಿಂದ ತೋಳೆಯಬೇಕು.
ಆಲ್ಕೊಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಜರ್‌ಗಳ ಬಳಕೆ ಮಾಡಬೇಕು.
ವ್ಯಕ್ತಿ ಕೆಮ್ಮುವಾಗ ಶಿನುವಾಗ ಸದಾ ಕರವಸ್ತ್ರ ಬಳಸಬೇಕು .
ಎಲ್ಲೆಂದರಲ್ಲಿ ಉಗುಳುವುದನ್ನು ಕಟ್ಟುನಿಟ್ಟಾಗಿ ನಿಷೇದಿಸಲಾಗಿದೆ.
ಎಲ್ಲರಿಂದ ಆರೋಗ್ಯದ ಸ್ವಯಂ ಮೇಲ್ವಿಚಾರಣೆ ಮತ್ತು ಯಾವುದೇ ಅನಾರೋಗ್ಯವನ್ನು ಬೇಗನೆ ವರಧಿ ಮಾಡಬೇಕು.
ವಿದ್ಯಾರ್ಥಿಗಳು ಪರಸ್ಪರ ಏನ್ನನ್ನು ಹಂಚಿಕೊಳ್ಳುವುದಕ್ಕೆ ಅವಕಾಶವಿಲ್ಲ.
ಕ್ರಿಡಾ ಚಟುವಟಿಕೆ ಮತ್ತು ಗುಂಪು ಸೇರುವಿಕೆ ನಿಷಿದ್ದವಾಗಿದೆ.
ಕೊಠಡಿಗಳ ಬದಲು ಶಾಲೆಯ ಹೊರಾಂಗಣದಲ್ಲಿ ತರಗತಿ ನಡೆಸುವುದು ಸೂಕ್ತ.



No comments