VARAHA MIHIRA - ವರಹ ಮಿಹಿರ
ವರಾಹ ಮಿಹಿರ – (ಕ್ರಿ.ಶ. 505 - 587 ) –
Varaha Mihira
“ಧನ್ವಂತರಿ ಕ್ಷಪಣ ಕಾಮರಸಿಂಹ
ವೇತಾಳ ಶಂಖಭಟ್ಟ ಘಟಕರ್ಪರಕಾಲಿದಾಸಾಃ |
ಖ್ಯಾತೋ ವರಾಹಮಿಹಿರೋ ನೃಪತೇಃಸ ಭಾಯಾಂ
ರತ್ನಾನಿವೈ ವರರುಚಿರ್ನವ ವಿಕ್ರಮಸ್ಯ “
ಈ ಶ್ಲೋಕದಂತೆ ವರಹಮಿಹಿರಾಚಾರ್ಯ ವಿಕ್ರಮಾದಿತ್ಯನ ಆಸ್ಥಾನದಲ್ಲಿದ ನವರತ್ನಗಳಲ್ಲಿ ಒಬ್ಬರಾಗಿದ್ದರು .
ಆದಿತ್ಯದಾಸ ಮತ್ತು ಸತ್ಯವತಿ ಎಂಬ ಅಗ್ರಹಾರದ ದಂಪತಿಗಳಿಗೆ ಮಗನಾಗಿ ಉಜ್ಜಯಿನಿಯಲ್ಲಿ ಜನಿಸಿದರು. ಇವರು ಆರನೇ ಶತಮಾನದಲ್ಲಿನ ಒಬ್ಬ ಖಗೋಳ ಶಾಸ್ತ್ರಜ್ಞ ಮತ್ತು ಗಣಿತ ಶಾಸ್ತ್ರಜ್ಞರಾಗಿದ್ದರು ಹಾಗೂ ಮಹಾನ ಜ್ಯೋತಿಷ್ಯ ಶಾಸ್ತ್ರಜ್ಞರಾಗಿದ್ದರು.
ಆದಿತ್ಯದಾಸರು ತನ್ನ ಮಗು ಸೂರ್ಯನಂತೆ ಬೆಳಗುವನಾಗಲಿ ಎಂಬ ಆಶಯದಂತೆ
ʼ ಮಿಹಿರ ʼ ( ಸುರ್ಯ ) ಎಂದು ಹೆಸರನಿಡ್ಡುತ್ತಾರೆ. ಮುಂದೆ ಮಿಹಿರನ್ನು ತನ್ನ ತಂದೆಯಿಂದ ಜ್ಯೋತಿಷದಲ್ಲಿ ಅಪಾರ ಪಾಂಡಿತ್ಯವನ್ನು ಪಡೆಯುತ್ತಾನೆ. ಮಿಹಿರನ ಪಾಂಡಿತ್ಯವನ್ನು ಗಮನಿಸಿದ ವಿಕ್ರಮಾದಿತ್ಯನ್ನ ಅವನಿಗೆ ತನ್ನ ಆಸ್ಥಾನದಲ್ಲಿ ವಿದ್ವಾಂಸನನ್ನಾಗಿ ನೆಮಿಸಿಕೊಳ್ಳುತ್ತಾನೆ.
ಮಿಹಿರನಿಗೆ ವರಹಮಿಹಿರ ಎಂಬ ಹೆಸರು ಹೆಗೆ ಬಂತು ಎನ್ನುವುದಕ್ಕೆ ಒಂದು ಕಥೆ ಇದೆ. ರಾಜನಾದ ವಿಕ್ರಮಾದಿತ್ಯನ ಮಗ 18 ವರ್ಷದವನಾದಾಗ ಒಂದು ಕಾಡು ಹಂದಿ ( ವರಹ ) ಅವನನ್ನು ಕೊಲ್ಲುತ್ತದೆ ಎಂದು ಭವಿಷ್ಯ ನುಡಿದಿದ್ದನಂತೆ. ಆ ಭವಿಷ್ಯ ಮುಂದೆ ನಿಜವಾಹಿತಂತೆ ಆಗಿನಿಂದ ಮಿಹಿರನಿಗೆ “ ವರಹಮಿಯಿರ “ ಎಂಬ ಹೆಸರು ಪಡೆದನೆಂದು ಪ್ರತಿತಿಯಿದೆ.
ವರಹ ಮಿಹಿರನ ಕೃತಿಗಳು :
ವರಾಹಮಿಹಿರನು ಮುಖ್ಯವಾದ ಮೂರು ಕೃತಿಗಳು ಸಂಸ್ಕೃತ ಭಾಷೆಯಲ್ಲಿ
ರಚಿಸಿದ್ದಾನೆ. ಅವುಗಳೆಂದರೆ ʼಪಂಚಾ ಸಿದ್ದಾಂತಿಕʼ ʼಬೃಹಜ್ಜಾತಕʼ ಮತ್ತು
ʼಬೃಹತ್
ಸಂಹಿತೆ ʼ ಆಗಿವೆ.
ವರಹಮಿಹಿರ ರಚಿಸಿರುವ ʼ ಪಂಚಾ ಸಿದ್ದಾಂತಿಕ ʼ ಕೃತಿಯಲ್ಲಿ
ʼಸೂರ್ಯ ಸಿದ್ದಾಂತ ʼ ವು ಖಗೋಳ ಶಾಸ್ತ್ರ ಅಧ್ಯಾಯ ಮಾಡುವವರಿಗೆ ಇಂದಿಗೂ ಅತಿ ಉಪಯುಕ್ತ ಕೃತಿಯಾಗಿದೆ.
ಪ್ರತಿ ವರ್ಷ ಪಂಚಾಂಗ ಸಿದ್ದಪಡಿಸುವುದು ಅದರಲ್ಲಿ ಒಂದು ಮುಖ್ಯಕಾರ್ಯ ವಾಗಿದೆ. ತಿಥಿ , ವಾರ , ನಕ್ಷತ್ರ . ಯೋಗ ಮತ್ತು ಕರಣ ಐದು ಅಂಗಗಳನ್ನೋಳಗೊಂಡಿದ್ದು ಈ ಪಂಚಾಂಗ ವ್ಯವಸ್ಥೆ.
ಹುಣ್ಣಿಮೆ , ಅಮವಾಸ್ಯೆ
ಮತ್ತು ಹಬ್ಬಗಳು ಯಾವಾಗ ಬರುತ್ತವೆ ?
ಗ್ರಹಣಗಳು ಯಾವಾಗ
ಸಂಬವಿಸುತ್ತವೆ ? ಇವುಗಳೆಲ್ಲವುಗಳ
ಕಾಲ ನಿರ್ಣಯಿಸುವುದಕ್ಕೆ ತುಂಬ ಉಪಯುಕ್ತ ಕೃತಿ ಈ ಸೂರ್ಯಸಿದ್ದಾಂತ ವಾಗಿದೆ.
ವರಹಮಿಯಿರನ
ʼ ಬೃಹಜ್ಜಾತಕ ʼ ಕೃತಿಯು ಒಬ್ಬ ವ್ಯಕ್ತಿಯ ಜಾತಕವನ್ನು ಹೇಗೆ ಬರೆಯಬೇಕು
ಎಂಬುದನ್ನು ತಿಳಿಸಿ ಕೊಡುತ್ತದೆ.
ʼಬೃಹತ್
ಸಂಹಿತೆ ʼ ಕೃತಿಯಲ್ಲಿ
ವರಹಮಿಯಿರನು ʼ ʼಮಳೆ ʼ ಯನ್ನು ಕುರಿತು ವಿವರಿಸಿದ್ದಾನೆ . ಮಳೆಯು ಯಾವ ದಿನಗಳಲ್ಲಿ ಬರುತ್ತದೆ ?
ಯಾವ ಮಾರುತಗಳು ಬೀಸಿದ್ದಾಗ ಮಳೆ ಆಗುವುದು ಎಂಬುದರ ಬಗ್ಗೆ ತೀಳಿಸಿಕೊಡುತ್ತಾನೆ.
ʼ ಬೃಹತ ಸಂಹಿತೆ ʼ ವರಹ ಮಿಯಿರನ ಅತ್ಯಂತ ಪ್ರಮುಖ ಕೃತಿ
. ಇದನ್ನು ಬೃಹತ ವಿಶ್ವಕೋಶ ಎನ್ನಬಹುದು . ಇದರಲ್ಲಿ ನಾಲ್ಕ ಸಾವಿರ ಶ್ಲೋಕಗಳಿವೆ. ಈ ಸಂಹಿತೆಯಲ್ಲಿ ಖಗೋಳಶಾಸ್ತ್ರ , ಭೂಗೋಳಶಾಸ್ತ್ರ , ಪಂಚಾಂಗ , ಪವನಶಾಸ್ತ್ರ , ವ್ಯವಸಾಯ , ಸಸ್ಯ
ಮತ್ತು ಪ್ರಣಿಶಾಸ್ತ್ರ , ಕಾಮಾಶಾಸ್ತ್ರ , ಹಾಗೂ ರತ್ನಶಾಸ್ತ್ರ ಇಂತಹ ಹಲವಾರು ಜ್ಞಾನದ ಶಾಖೆಗಳಿವೆ.


ಭೂಮಿಯನ್ನು
ಕುರಿತು ವರಹಮಿಯಿರನ್ನು ಹೀಗೆ
ವಿವರಿಸಿದ್ದಾನೆ .
ಭೂಮಿಯು ಗೋಲದ
ಆಕಾರದಲ್ಲಿದ್ದು ಪಂಚಭೂತಗಳಿಂದ ಆಗಿರುವುದಾಗಿಯೂ, ಅಯಸ್ಕಾಂತಗಳ ಪಂಜರದ ಮಧ್ಯದಲ್ಲಿ ತೂಗಿಬಿಟ್ಟ ಕಬ್ಬಿಣದ
ಚೆಂಡಿನಂತೆ ಆಕಾಶದಲ್ಲಿ ತೇಲುತ್ತಿದೆ ಎಂದು ಹೇಳಿರುತ್ತಾನೆ.
“ ಪಂಚ ಮಹಾಭೂತಮಯ ಸ್ತಾರಾಗಣ ಪಂಜರೇ ಮಹಿಗೋಲಃ |
ಬೆಯಸ್ಕಾಂತಸ್ಥೋ ಲೋಹ ಇವಾವಸ್ಥಿ ತೊ ವೃತ್ತಃ ||”
ಆಕಾಶದಲ್ಲಿ
ಗ್ರಹ ತಾರಾವಲಯಗಳು ಬೇರೆ ಬೇರೆ ಗೋಳಗಳಲ್ಲಿ ಹಂಚಿಕೆಯಾಗಿವೆಯೆಂದು ವರಹಮಿಹಿರ ನಂಬಿದ್ದ. ಚಂದ್ರನಿಂದಾಚೆಗೆ
ಎತ್ತರೆತ್ತರಕ್ಕೆ ಹೋದಂತೆ , ಭುದ , ಶುಕ್ರ , ಸೂರ್ಯ , ಮಂಗಳ , ಗುರು ಮತ್ತು ಶನಿ ಗ್ರಹಗಳಿದ್ದು
ಅದರಾಚೆ ಸ್ಥಿರ ನಕ್ಷತ್ರ ಖಚಿತವಾದ ಆಕಾಶವಿದೆ. ಎಲ್ಲ
ಕಾಯಗಳು ತಮ್ಮದೇ ಆದ ಪಥದಲ್ಲಿ ನಿಶ್ಚಿತ ವೇಗದಲ್ಲಿ ಸುತ್ತುತ್ತವೆ ಎಂದು ಪ್ರತಿಪಾದಿಸಿದ.
ಗ್ರಹಣಗಳ ಬಗೆ ಆತ ಹೇಳಿತ್ತಾನೆ ,
“ ಭೂ ಛಾಯಾಂ ಸ್ವಗ್ರಹಣೇ ಭಾಸ್ಕರ ಮರ್ಕಗ್ರಹೇ ಪ್ರವಿಶ ತಿಂದು
ಪ್ರಗ್ರಹಣ ಮತಃ ಪ್ರಶ್ತಾನ್ನೆಂದೊ ರ್ಭಾ ನೋಶ್ಚ ಪೊರ್ವಾರ್ಧಾತ್
|
ವೃಕ್ಷಸ್ಯ ಸ್ವಚ್ಛಾಯಾ ಯದೈಕ ಪಾರ್ಶ್ವ ಭವತಿ ದೀರ್ಘಚಯಾ
|
ನಿಶಿ ನಿಶಿ ತದ್ವದ್ ಭೂಮೆರಾವರಣ ವಶಾದ್ವಿನೇಶಸ್ಯ
|| “
ಅಂದರೆ, ಚಂದ್ರಗ್ರಹಣದಲ್ಲಿ
ಚಂದ್ರ ಭೂಮಿಯ ನೆರಳನ್ನು ಪ್ರವೇಶಿಸುತ್ತದೆ. ಸೂರ್ಯನ ನೆರಳನ್ನು ಚಂದ್ರ ಪ್ರವೇಶಿಸಿದರೆ ಅದು ಸೂರ್ಯ
ಗ್ರಹಣ.
ವರಹಮಿಯಿರ
ಒಬ್ಬ ತತ್ವಜ್ಞಾನಿಯೂ ಆಗಿದ್ದರು . ಇವರು ಹೇಳಿದ್ದೆಲ್ಲವು ತಾವು ಕಂಡ ಸತ್ಯವನ್ನು ಹಾಗೂ ತನಗೆ ಒಪ್ಪಿಗೆಯಾದುದನು
ಮಾತ್ರ. ಹೀಗೆ ವರನಮಿಯಿರ ಒಬ್ಬ ಮಹಾನ ಭಾರತೀಯ ಗಣಿತಜ್ಞರಾಗಿದ್ದರು.


No comments