Header Ads

SRINIVAS RAMANUJAN - ಶ್ರೀನಿವಾಸ ರಾಮಾನುಜನ್.



ಪ್ರಸಿದ್ಧ ಗಣಿತಜ್ಞರು
ಶ್ರೀನಿವಾಸ ರಾಮಾನುಜನ್‌- 
Srinivas Ramanujan


ವಿಶ್ವ ಕಂಡ ಅತಿ ಶ್ರೇಷ್ಟ ಗಣಿತ ತಜ್ಷರ ಸಾಲಿನ ನಿಲ್ಲುವ ಏಕೈಕ ಭಾರತೀಯ ಹಾಗೂ ಆಧುನಿಕ ಭಾರತದಲ್ಲಿ ಗಣಿತ ಕ್ಷೇತ್ರದಲ್ಲಿನ ಬಹುದೊಡ್ಡ ಹೆಸರು 
ಶ್ರೀನಿವಾಸ ರಾಮಾನುಜನ್‌.
ರಾಮಾನುಜನ್‌ 1887 ಡಿಸೆಂಬರ್‌ 22 ರಂದು ತಮಿಳುನಾಡಿನ ಕುಂಭಕೋಣಂ ಪಟ್ಟಣದಲ್ಲಿ ಜನಿಸಿದರು. ತಂದೆ ಶ್ರೀನಿವಾಸ ಅಯ್ಯಂಗಾರ್‌. ಖಾಸಗಿ ಬಟ್ಟೆ ಅಂಗಡಿಯಲ್ಲಿ ಗುಮಾಸ್ತ, ತಾಯಿ ಕೋಮಲಮ್ಮಾಳ್‌.

ಅವರದು ಬಡತನದ ಜೀವನ. ಆಗ ಭಾರತ ಬ್ರಿಟಿಷ್‌ರ ಆಡಳಿತಕ್ಕೆ ಸಿಕ್ಕಿ ತತ್ತರಿಸಿತ್ತು.
ರಾಮಾನುಜನನ್‌ ಟೌನ್‌ ಹೈಸ್ಕೂಲಿನಲ್ಲಿ ಓದಿದರು. ಅವರು ವಿದ್ಯಾರ್ಥಿಯಾಗಿದ್ದಾಗ ಅವರ ಮನಸ್ಸೆಲ್ಲಾ ಸತ್ಯ ಶೋಧನೆಯ ಕಡೆಗಿತ್ತು.ಒಮ್ಮೆ ಅವರು ವಿದ್ಯಾರ್ಥಿಯಾಗಿದ್ದಾಗ ಉಪಾಧ್ಯಾಯರಿಗೆ ಕೇಳಿದ ಪ್ರಶ್ನೆ ಅವರ ಅಗಾದ ಬುದ್ದಿಮತ್ತೆಗೆ ಉದಾಹರಣೆಯಾಗಿದೆ. 

ತರಗತಿಯಲ್ಲಿ ಒಂದು ದಿನ ಉಪಾಧ್ಯಾಯರು ಭಾಗಾಕಾರ ಲೆಕ್ಕಗಳ ಬಗ್ಗೆ ತಿಳಿಸಿಕೊಡುತ್ತಿದ್ದರು. ಐದು ಹಣ್ಣುಗಳನ್ನು ಐದು ಜನರಿಗೆ ಕೊಟ್ಟರೆ ಒಬ್ಬರಿಗೆ ಎಷ್ಟು ಹಣ್ಣುಗಳು ಬರುತ್ತವೆ ? 
ಮಕ್ಕಳೆಲ್ಲ, ಒಬ್ಬರಿಗೆ ಒಂದು ಹಣ್ಣು ಬರುತ್ತೆ ಗುರುಗಳೆ ಎನ್ನುತ್ತಾರೆ. ಹಾಗೆ 5 ನ್ನು 5 ರಿಂದ ಭಾಗಿಸಿದರೆ ಉತ್ತರ 1 ಬರುತ್ತೆ ಎಂದು ಉಪಾಧ್ಯಾಯರು ತಿಳಿಸುತ್ತಾರೆ.
ಆಗ ಒಬ್ಬ ಬಾಲಕ ನಿಂತು 5 ನ್ನು 0 ಯಿಂದ ಭಾಗಿಸಿದರೆ ಏನು ಬರುತ್ತೆ ಗುರುಗಳೆ ಎನ್ನುತ್ತಾನೆ.
ಆಗ ಉಪಾಧ್ಯಾಯರು ಚಕಿತಗೊಳ್ಳುತ್ತಾರೆ. 
1903 ರಲ್ಲಿ ರಾಮಾನುಜನ್ನ ಮೆಟ್ರಿಕ್ಯುಲೆಷನ್‌ ಮುಗಿಸಿದರು ಆ ವೇಳೆಗೆ ಅವರು ಲೋನಿ ಬರೆದ
ಟ್ರಿಗನಾಮಿಟಿ ಎಂಬ ಗ್ರಂಥವನ್ನು ಹಾಗೂ ಕಾರ್‌ ಎಂಬ ಲೇಖಕರು ಬರೆದ
“ Synopsis of Elementry Results in Pure and Applied Mathematics “  ಎಂಬ ಗ್ರಂಥ ಓದಿ ಅರ್ಥ ಮಾಡಿಕೊಂಡಿದ್ದರು.

1909 ರಲ್ಲಿ ರಾಮಾನುಜನ್‌ರಿಗೆ ಜಾನಕಿ ಎಂಬುವರ ಜೊತೆ ಮದುವೆಯಾಗುತ್ತದೆ. ಸಂಸಾರಿಯಾದ ರಾಮಾನುಜನ್‌ರಿಗೆ ಜೀವನ ನಿರ್ವಹಣೆಗೆ ಒಂದು ಉದ್ಯೋಗ ಹುಡುಕಬೇಕಾಗುತ್ತದೆ. ರಾಮಾಸ್ವಾಮಿ ಅಯ್ಯರ್‌ ಎಂಬುವವರು ರಾಮಾನುಜನ್‌ರಿಗೆ ಮದ್ರಾಸಿನ ಪೋರ್ಟ ಒಂದರಲ್ಲಿ ಗುಮಾಸ್ತನ ಕೆಲಸ ಕೊಡಿಸುತ್ತಾರೆ. ಅವರಿಗೆ ಜೀವನ ನಡೆಸಲು ಅನುಕೂಲವಾಗುತ್ತದೆ ಹಾಗೆ ಬಿಡುವಿನ ವೇಳೆಯಲ್ಲಿ ತಮ್ಮ ಗಣಿತದ ಅಧ್ಯಾಯನವನ್ನು ಮುಂದುವರೆಸುತ್ತಾರೆ.
ಗಣಿತಕ್ಕೆ ಸಂಭದಿಸಿದ ಅನೇಕ ಪ್ರಬಂಧಗಳನ್ನು ಹಾಗು ಪ್ರಮೇಯಗಳನ್ನು ರಾಮಾನುಜನ್‌ರು ಬರೆದು ಅವುಗಳನ್ನೆಲ್ಲ  ಇಂಗ್ಲೆಂಡಿನ ಖ್ಯಾತ ಗಣಿತಜ್ಞ ಗಾಡ್‌ಫ್ರೇ ಹೆರಾಲ್ಡ್‌ ಹಾರ್ಡಿ ಯವರಿಗೆ ಕಳುಹಿಸಿಕೊಡುತ್ತಾರೆ.
ರಾಮಾನುಜನ್ನರ ಪತ್ರ ಪ್ರಬಂಧಗಳನ್ನು ನೋಡಿ ಮೆಚ್ಚಿಕೊಂಡ ಹಾರ್ಡಿಯವರು ಅವರನ್ನು ಕೇಂಬ್ರಿಜ್‌ಗೆ ಕರೆಯಿಸಿಕೊಳ್ಳುತ್ತಾರೆ. 1914 ರಲ್ಲಿ ರಾಮಾನಿಜನ್‌ ಹಡಗಿನಲ್ಲಿ ಇಂಗ್ಲೆಂಡಿಗೆ ತೆರಳುತ್ತಾರೆ.
ರಾಮಾನುಜನ್ನರು ಇಂಗ್ಲೆಂಡಿನಲ್ಲಿ ಅನೇಕ ಸಂಶೋಧನ ಪ್ರಬಂಧಗಳನ್ನು ಪ್ರಕಟಿಸುತ್ತಾರೆ. ಎಲ್ಲವು ಶ್ರೇಷ್ಟ ಪ್ರಬಂಧಗಳೆ ಆಗಿರುತ್ತವೆ. 
ಇಂಗ್ಲೆಂಡಿನ ಹವೆ, ಅಲ್ಲಿನ ಆಹಾರ ಸರಿ ಹೊಂದದೆ ರಾಮಾನುಜನ್ ಕ್ಷಯರೋಗ ಪೀಡಿತರಾಗುತ್ತಾರೆ.ಅವರು 1919 ರಲ್ಲಿ ಮರಳಿ ಭಾರತಕ್ಕೆ ಬರುತ್ತಾರೆ. ಆಮೇಲೆ ಅವರು ಹೆಚ್ಚು ಕಾಲ ಬದುಕಲಿಲ್ಲ. 1920 ಏಪ್ರಿಲ್‌ 26 ರಂದು ಮಹಾನ ಗಣಿತ ಪ್ರತಿಬೆ ರಾಮಾನುಜನ್‌ ಇಹ ಲೋಕ ತೆಜಿಸುತ್ತಾರೆ.


S Ragalekha asst.master Ghs Habal.t Tq : Sedam Di : Kalburgi


                 

It is one of the most romantic stories in the history of mathematics: in 1913, the English mathematician G. H. Hardy received a strange letter from an unknown clerk in Madras, India.
The ten-page letter contained about 120 statements of theorems on infinite series, improper integrals, continued fractions, and number theory (Here is a  with a sample of these results). Every prominent mathematician gets letters from cranks, and at first glance Hardy no doubt put this letter in that class. But something about the formulas made him take a second look, and show it to his collaborator J. E. Littlewood. After a few hours, they concluded that the results "must be true because, if they were not true, no one would have had the imagination to invent them".
Thus was Srinivasa Ramanujan (1887-1920) introduced to the mathematical world. Born in South India, Ramanujan was a promising student, winning academic prizes in high school. But at age 16 his life took a decisive turn after he obtained a book titled A Synopsis of Elementary Results in Pure and Applied Mathematics.


S Ragalekha asst.master Ghs Habal.t Tq : Sedam Di : Kalburgi

No comments

Powered by Blogger.