ARYABHATA - ಆರ್ಯಭಟ
ಆರ್ಯಭಟ – (ಕ್ರಿ.ಶ. 476 - ) - Aryabhata
“ ಚತುಧಿಕಂ ಶತಮಷ್ಟಗುಣಂದ್ವಾಷಷ್ಟಿಸ್ತಥಾ ಸಹಸ್ರಾಣಾಮ್
ಅಂದರೆ ಒಂದು ವೃತ್ತದ ವ್ಯಾಸವು ಅದರ ಸುತ್ತಳತೆ ಯಿಂದ ಭಾಗಿಸಿದರೆ ಅದು “ ಪೈ” ನ ಬೆಲೆಗೆ ಹತ್ತಿರವಾದದು ಎಂದು ತಿಳಿಸಿದ ಮೊದಲಿಗ ಹಾಗೂ ಗಣಿತ ಶಾಸ್ತ್ರಕ್ಕೂ ಮತ್ತು ಖಗೋಳಶಾಸ್ತ್ರಕ್ಕೆ ವ್ಯವಸ್ಥಿತ ರೂಪ ಕೊಟ್ಟ ಮಹಾನ ಮೇಧಾವಿಯೆ ಆರ್ಯಭಟ.
ಭಾರತೀಯ ವಿಜ್ಞಾನಿಗಳು 1975ರಲ್ಲಿ ಹಾರಿಸಲಾದ ಉಪಗ್ರಹಕ್ಕೆ ಭಾರತದ ಪ್ರಥಮ ಗಣಿತಚಾರ್ಯ ಹಾಗೂ ಖಗೋಳವಿಜ್ಙಾನಿ ಆರ್ಯಭಟನ ಹೆಸರನ್ನಿಟ್ಟು ಗೌರವಿಸಲಾಗಿದೆ. ಭಾರತವು ಹಲವಾರು ಗನಿತಜ್ಞರನ್ನು ಕಂಡಿರುವುದು ಇಲ್ಲಿ ಸ್ಮರಿಸಬಹುದಾಗಿದೆ. ಆರ್ಯಭಟ ಜನಿಸಿದ್ದು ಪ್ರಾಯಶಃ 5ನೇ ಶತಮಾನದವನು ಎನ್ನುವ ಪ್ರತಿತಿ ಇದೆ(ಕ್ರಿ.ಶ – 476 ) . ಹಿಂದೆ ಪಾಟಲಿಪುತ್ರಕ್ಕೆ ಈಗಿನ ಬಿಹಾರ ರಾಜ್ಯ ಕುಸುಮಾಪುರ ಎಂಬ ಹೆಸರಿತ್ತು. ಇದುವೆ ಇಂದಿನ ಪಾಟ್ನಾ . ಆರ್ಯಭಟ ಕುಸುಮಾಪುರದವನು ಎಂದು ತಿಳಿಯಲಾಗಿದೆ ಹಾಗೆ ಅತಿ ಹೆಸರುವಾಸಿಯಾದ ನಲಂದಾ ವಿಶ್ವವಿಧ್ಯಾಲಯ ಇದ್ದದೂ ಇಲ್ಲೆ.
ಇದು ಖಗೋಳಶಾಸ್ರ್ತ ಅಧ್ಯಾಯನಕ್ಕೆ ತುಂಬ ಪ್ರಾಮುಖ್ಯತೆ ನಿಡಿತ್ತು. ಹಾಗೆ ನೋಡಿದರೆ ಆರ್ಯಭಟನ ಕಾಲಕ್ಕೆ ಭಾರತೀಯ ಖಗೋಳಶಾಸ್ರ್ತ ತುಂಬ ದುಃಸ್ಥಿತಿಯಲ್ಲಿತ್ತು ಆಗ ಖಗೋಳವಿಜ್ಙಾನಕ್ಕೆ ಸರಿಯಾದ ದಾರಿ ತೋರಿ ಅದನ್ನು ನವನವೀನಗೋಳಿಸಿದ ಕೀರ್ತಿ ಆಯಭಟನಿಗೆ ಸಲ್ಲುತ್ತದೆ.
ಆರ್ಯಭಟನ ತಂದೆ ತಾಯಿ ಯಾರು ಎಂದು ಖಚಿತವಾಗಿ ತಿಳಿದಿಲ್ಲ. ಆತ ಮಹಾಜ್ಞಾನಿಯಾಗಿದ್ದಂತೆ ದೊಡ್ಡ ತಪಸ್ವಿಯು ಆಗಿದ್ದ. ಗೃಹಗಳ ಚಲನೆಯ ಸ್ವರೂಪವನ್ನು ತನ್ನ ತಪಸ್ಸಿನ ಮಾರ್ಗದಿಂದ ಕಂಡುಹಿಡಿದ ಎನ್ನಲಾಗುತ್ತದೆ.
ಆರ್ಯಭಟ ವಿಧ್ಯಾಗುರುವಾಗಿ ವೃತ್ತಿಯನ್ನು ಕೈಗೊಂಡಿದ್ದ. ಇತನಿಗೆ ಲಾಟದೇವ, ಪಾಂಡುರಂಗಸ್ವಾಮಿ ಮತ್ತು ನಿಶ್ಯಂತ ಎಂಬ ಮೂವರು ಮುಖ್ಯ ಶಿಷರಿದ್ದರು. ಲಾಟದೇವ ಖಗೋಳಶಾಸ್ತ್ರಜ್ಞನೆಂದು ಖ್ಯಾತಿಗಳಿಸಿದ. ಆರ್ಯಭಟನ ಬಗೆಗೆ ನಮಗೆ ತಿಳಿದುಬರುವುದು ಮೊದಲನೆಯ ಭಾಸ್ಕರಾಚಾರ್ಯನ ಬರಹದಿಂದಲಲಷ್ಟೆ.
ಆರ್ಯಭಟ ತನ್ನ ಗಣಿತದ ಸಾಧನೆಗಳನ್ನು 121 ಶ್ಲೋಕಗಳ ತನ್ನ “ಆರ್ಯಭಟೀಯಂ”
ಕೃತಿಯಲ್ಲಿ ವಿವರಿಸಿದ್ದಾನೆ. ನಾಲ್ಕು ಪಾದಗಳ ಈ ಕೃತಿ ಮಹತ್ವದ ಕೃತಯಾಗಿದೆ.
ಗೀತಿಕಪಾದ, ಗಣಿತಪಾದ, ಕಾಲಕ್ರಿಯಪಾದ ಹಾಗೂ ಗೋಳಪಾದ ಎಂಬ ನಾಲ್ಕು ಪಾದಗಳಲ್ಲಿ ಆರ್ಯಭಟ ಗ್ರಹಗಳು ಸುತ್ತುವ ವಿಧಾನ, ಕಾಲನಿರ್ಣಯ, ಯುಗಗಳ ಪ್ರಮಾಣ, ವಾರ, ಮಾಸ ಇವುಗಳ ನಿರ್ಣಯ, ಗ್ರಹಣ, ಸೂರ್ಯೋದಯ ಸೂರ್ಯಾಸ್ತಮಯ ಇವೆಲ್ಲದರ ಬಗೆ ಸರಳವಾಗಿ ವಿವರಿಸಿದ್ದಾನೆ.
ಗಣಿತಪಾದದಲ್ಲಿ ಗಣಿತದಲ್ಲಿ ಬರುವ ವರ್ಗಮೂಲ, ಘನಮೂಲ, ತ್ರಿಕೋನಾದಿ ಕ್ಷೇತ್ರಫಲ, ಜ್ಯಾಮಿತಿಯ ಅಂತರಗಳು, ದೀಪನೆರಳುಗಳಿಗೆ ಸಂಬಂದಿಸಿದ ಲೆಕ್ಕಗಳು ಮೊದಲಾದವುಗಳ ಬಗೆ ವಿವರಿಸಲಾಗಿದೆ.
ತ್ರಿಬುಜದ ಕ್ಷೇತ್ರ ಫಲದ ಸೂತ್ರವನ್ನು ಆರ್ಯಭಟ ಕೊಟ್ಟಿದ್ದಾನೆ.
“ ತ್ರಿಭುಜಸ್ಯ ಫಲಶರೀರಂ ಸಮದಲಕೋಟಿ ಭುಜಾರ್ಧಸಂವರ್ಗಃ “ ಎನ್ನುತ್ತಾನೆ.
ಇದರ ಅರ್ಥ “ ಲಂಬ ( ಶೃಂಗದಿಂದ ಪಾದಕ್ಕೆಳೆದದ್ದು ) ಮತ್ತು ಪಾದದ ಅರ್ಧದ ಗುಣಲಬ್ಧ ತ್ರಿಭುಜದ ಕ್ಷೇತ್ರಫಲ. “
“ ಆರ್ಯಭಟಸಿದ್ದಾಂತ
” ಆರ್ಯಭಟನ ಇನ್ನೊಂದು ಗಣಿತ ವಿಷಯಕ್ಕೆ ಸಂಬಂಧಿಸಿದ ಮೇರು ಕೃತಿಯಾಗಿದೆ. ಇದರಲ್ಲಿ ಬೀಜಗಣಿತ ,
ತ್ರಿಕೋನಮಿತಿ ಮತ್ತು ಖಗೋಳ ವಿಜ್ಞಾನಕ್ಕೆ ಆರ್ಯಭಟನ
ಕೊಡುಗೆ ಅಪಾರವಾಗಿದೆ.




Nice
ReplyDelete